ದೆಹಲಿ :
ಮೇ ತಿಂಗಳಲ್ಲಿ 2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದ್ದ ಆರ್ಬಿಐ ಬಳಿಕ ಅವುಗಳನ್ನು ಬ್ಯಾಂಕಿಗೆ ಹಿಂದಿರುಗಿಸಲು ನೀಡಿದ್ದ ಮೂರು ತಿಂಗಳ ಗಡುವು ಸೆಪ್ಟೆಂಬರ್ 30 ಶನಿವಾರ ಕೊನೆಗೊಳ್ಳಲಿದೆ.
ಆದ್ದರಿಂದ ಸಾರ್ವಜನಿಕರು ತಮ್ಮ ಬಳಿ ಇರುವ 2000 ರೂಪಾಯಿ ಮುಖಬೆಲೆಯ ನೋಟನ್ನು ಬ್ಯಾಂಕಿಗೆ ತೆರಳಿ ಬದಲಾಯಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಗೆ ಠೇವಣಿ ಮಾಡಿಕೊಳ್ಳಬಹುದು. ಆದರೆ ಈ ಗಡುವು ಮುಗಿದ ನಂತರ ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆ ಇದೆ. ಈ ಬಗ್ಗೆ ಆರ್ ಬಿ ಐ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ನೋಟುಗಳ ಪೈಕಿ ಆಗಸ್ಟ್ 31ರ ವೇಳೆಗೆ ಶೇಕಡಾ 93 ರಷ್ಟು ನೋಟುಗಳು ಬ್ಯಾಂಕಿಗೆ ಮರಳಿದ್ದವು.