ಬೆಂಗಳೂರು :
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿದೆ.
ನಾಮಪತ್ರ ಸಲ್ಲಿಸಿರುವ ಎಷ್ಟು ಜನ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುತ್ತಾರೆ, ಅಂತಿಮವಾಗಿ ಕಣದಲ್ಲಿ ಎಷ್ಟು ಜನ ಉಳಿಯುತ್ತಾರೆ ಎಂಬ ಸ್ಪಷ್ಟ ಚಿತ್ರಣ ಸಂಜೆ ಗೊತ್ತಾಗಲಿದೆ.
ರಾಜ್ಯದ 224 ವಿಧಾನಸಭಾ ಮತಕ್ಷೇತ್ರ ಗಳಿಗೆ 3632 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪೈಕಿ ಚುನಾವಣಾ ಆಯೋಗ 502 ಅಭ್ಯರ್ಥಿಗಳ ನಾಮಪತ್ರಗಳನ್ನು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಿದೆ. ಉಳಿದ 330 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಪ್ರಕಟಿಸಿದ್ದು ನಾಮಪತ್ರ ಹಿಂಪಡೆಯಲು ಸಂಜೆವರೆಗೆ ಅವಕಾಶವಿದೆ.