ಕಾಂಗ್ರೆಸ್ ನ ನಿಷ್ಠಾವಂತ ಚಾಣಕ್ಯನಿಗೆ ಶುಭಾಶಯಗಳ ಮಹಾಪುರ
ಬೆಳಗಾವಿ :
ಸಮಚಿತ್ತ ಭಾವ, ಶಾಂತ-ಸೌಮ್ಯ ಸ್ವಭಾವ, ಸರಳತೆ, ತಾಳ್ಮೆ, ಮಾನವೀಯ ಗುಣವುಳ್ಳ ಮತ್ತು ಸಹನಶೀಲ ವ್ಯಕ್ತಿತ್ವವುಳ್ಳ ಸುಧೀರ ಗಡ್ಡೆ ಅವರಿಗೆ ಇಂದು ಸೋಮವಾರ 43ನೇ ಜನ್ಮದಿನದ ಸುಸಂದರ್ಭ.
ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸುಧೀರ ಗಡ್ಡೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರಾಗಿ ಹಾಗೂ ಪಕ್ಷದ ಚತುರ ಚಾಣಕ್ಯನಾಗಿ ಹೊರ ಹೊಮ್ಮಿದ್ದಾರೆ. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಮೂಲತಃ ಕಣಬರ್ಗಿಯಲ್ಲಿ ಜನಿಸಿರುವ ಸುಧೀರ ಗಡ್ಡೆ ತಮ್ಮಕಾರ್ಯ ವ್ಯಾಪ್ತಿಯನ್ನು ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆವರೆಗೆ ವ್ಯಾಪಿಸಿಕೊಂಡಿದ್ದಾರೆ.
ಗಡ್ಡೆ ಡೆವೆಲಪರ್ಸ್ ಎಂಬ ಸಂಸ್ಥೆ ಮೂಲಕ ಅನೇಕರಿಗೆ ಸೂರು ಒದಗಿಸುವ ಕಾರ್ಯ ಮಾಡುತ್ತಿರುವ ಸುಧೀರ ಗಡ್ಡೆ ಖ್ಯಾತ ಉದ್ದಿಮೆಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವ ನಿಷ್ಠಾವಂತ ಹಾಗೂ ಪಕ್ಷ ನಿಷ್ಠೆಗೆ ಬದ್ಧತೆಯ ಅಚ್ಚೊತ್ತಿದವರು ಸುಧೀರ ಗಡ್ಡೆ.
ತಂದೆ ನಾಗೇಶ ಗಡ್ಡೆ ಅವರ ಮಾರ್ಗದರ್ಶನದಲ್ಲಿ ಸಾಗಿ ಬಂದಿರುವ ಸುಧೀರ ಅವರು ಅಧಿಕಾರ ಇರಲಿ, ಇಲ್ಲದಿರಲಿ ಜನಪರ ಧ್ವನಿ ಕ್ಷೀಣಿಸಬಾರದು ಎಂಬ ಉದ್ದೇಶದಿಂದ ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಹಲವಾರು ವರ್ಷಗಳಿಂದ ಪಕ್ಷಕ್ಕೆ ಬದ್ಧರಾಗಿ ತಮ್ಮದೇ ಛಾಪು ಮೂಡಿಸಿರುವ ಯುವ ನಾಯಕ, ಜನಸೇವಕ ಸುಧೀರ ಗಡ್ಡೆ ಸಮಾಜದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.