ಬೆಳಗಾವಿ: ಇಲ್ಲಿನ ರಾಣಿ ಚನ್ಮಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಪಿಎಂ-ಉಷಾ ಮೇರು ಸಾಫ್ಟ್ ಘಟಕ-23ರ ಯೋಜನೆಯಡಿ ಸೆ.18ರಂದು ಬೆಳಗ್ಗೆ 10.30ಕ್ಕೆ ‘ಸಾಫ್ಟ್ ಸ್ಕಿಲ್ಸ್, ನಾಯಕತ್ವ ಹಾಗೂ ಸಂವಹನ ಅಭಿವೃದ್ಧಿ’ ವಿಷಯ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ.
ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಆರ್.ಜಿ.ಹೆಗಡೆ ಆಗಮಿಸಲಿದ್ದಾರೆ.
ವಿ.ವಿಯ ಸಿಂಡಿಕೇಟ್ ಸದಸ್ಯರು, ಅಧಿಕಾರಿಗಳು ಭಾಗವಹಿಸುವರು. ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕಿ ಪೂಜಾ ಹಲ್ಯಾಳ
ಸಂಯೋಜಕಿಯಾಗಿ ಕಾರ್ಯಕ್ರಮ ನಿರ್ವಹಿಸುವರು. ಕಾರ್ಯಾಗಾರದಲ್ಲಿ ಎರಡು ಗೋಷ್ಠಿ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.