ಬಾಗಲಕೋಟೆ: ಬೆಳ್ಳಂಬೆಳಗ್ಗೆ ಕಾರು, ಟಾಟಾ ಏಸ್ ಮತ್ತು ಎರಡು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಹಲಗೂರ ಬಳಿ ನಡೆದಿರುವ ಅಪಘಾತದಲ್ಲಿ ಟಾಟಾ ಏಸ್, ಕಾರು ಮತ್ತು ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂರು ವಾಹನದಲ್ಲಿದ್ದ ಮೂವರು ಸವಾರರು ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಮಹಾಂತೇಶ್ ಹೊನಕಟ್ಟಿ(35), ಬೆಳಗಾವಿಯ ಅರಬಾವಿಯ ನಿವಾಸಿ ಭೀಮಪ್ಪ ಗುಂಟೆಪ್ಪನವರ, ಬಾಗಲಕೋಟೆ ಜಿಲ್ಲೆಯ ಜಂಬಗಿ ಗ್ರಾಮದ ಆನಂದ್ ಬಾಡಗಿ (22) ಮೃತಪಟ್ಟಿದ್ದಾರೆ.
ಜಮಖಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್ಐ ಗಂಗಾಧರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.