ಖಡೇಬಜಾರ ಪೊಲೀಸರಿಂದ ಖಡಕ ಕಾರ್ಯಾಚರಣೆ ..!
ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ..!
ಬೆಳಗಾವಿ : ಜೂನ್ ತಿಂಗಳಿನಲ್ಲಿ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಿವಿಎಸ್ ಅಪಾಚೆ ಆರ್ಟಿಆರ್ ಮೋಟಾರ ಸೈಕಲ್ ಕಳ್ಳತನವಾದ ಬಗ್ಗೆ ದೂರು ನೀಡಿದ್ದರ ಮೇರೆಗೆ ಖಡೇಬಜಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 47/2023 ಕಲಂ. 379 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.
ದಿನಾಂಕ: 27/11/2023 ರಂದು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ
1] ಮಹೇಶ ನಿಂಗಪ್ಪ ಮಾದರ, ವಯಸ್ಸು: 23 ವರ್ಷ, ಸಾ: ಕುರುಬರದಿನ್ನಿ, ತಾ: ಕೋಲ್ಹಾರ, ಹಾಲಿ: ಅಥರ್ಗಾ ತಾ: ಇಂಡಿ, ಜಿ: ವಿಜಯಪೂರ.
2] ಅಮೀರ ಬಾಬು ಏಳಗಿ, ವಯಸ್ಸು: 19 ವರ್ಷ, ಸಾ: ಅಥರ್ಗಾ, ತಾ: ಇಂಡಿ, ಜಿ: ವಿಜಯಪೂರ.
3] ಪ್ರಶಾಂತ ಗೋಪಾಲ ಮೋರೆ, ವಯಸ್ಸು: 21 ವರ್ಷ, ಸಾ: ಅಥರ್ಗಾ, ತಾ: ಇಂಡಿ, ಜಿ: ವಿಜಯಪೂರ. ಈ ಮೂವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಮೋಟಾರ ಸೈಕಲ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಲ್ಲದೇ, ಆರೋಪಿತರು ಬೆಳಗಾವಿ, ಅಥಣಿ, ವಿಜಯಪೂರ ಮತ್ತು ಮಹಾರಾಷ್ಟ್ರದ ಸೋಲ್ಲಾಪೂರ ಹಾಗೂ ಗೋವಾದಲ್ಲಿಯೂ ಮೋಟಾರ ಸೈಕಲ್ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿತರಿಂದ ಒಂದು ಟಿವಿಎಸ್ ಅಪಾಚೆ ಮೋಟಾರ ಸೈಕಲ್,
02 ಬಜಾಜ್ ಪಲ್ಸರ್ ಎನ್ಎಸ್ ಮೋಟಾರ ಸೈಕಲ್ಗಳು,
05 ಹಿರೋ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ಗಳು,
02 ಹೊಂಡಾ ಶೈನ್ ಮೋಟಾರ ಸೈಕಲ್ಗಳು,
ಒಂದು ಬಜಾಜ ಪ್ಲಾಟೀನಾ ಮೋಟಾರ ಸೈಕಲ್ ಮತ್ತು
ಒಂದು ಹಿರೋ ಸ್ಟೆಂಡರ್ ಪ್ರೋ ಮೋಟಾರ ಸೈಕಲ್ ಹೀಗೆ ಒಟ್ಟು 6,79,000/- ರೂ ಕಿಮ್ಮತ್ತಿನ 14 ಮೋಟಾರ ಸೈಕಲ್ಗಳನ್ನು ವಶಪಡಿಸಿಕೊಂಡಿದ್ದು ಖಡೇಬಜಾರ ಪೊಲೀಸ್ ಠಾಣೆಯ 04 ಪ್ರಕರಣಗಳು, ಅಥಣಿ ಪೊಲೀಸ್ ಠಾಣೆಯ 01 ಪ್ರಕರಣ ಮತ್ತು ಜಲನಗರ ಪೊಲೀಸ್ ಠಾಣೆಯ 01 ಮೋಟಾರ ಸೈಕಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದು ಇನ್ನೂಳಿದ ಮೋಟಾರ ಸೈಕಲ್ಗಳ ವಾರಸುದಾರರ ಪತ್ತೆ ಕಾರ್ಯ ಮುಂದುವರೆಸಿ ಆರೋಪಿಗಳನ್ನು ದಸ್ತಗೀರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
DCP ಸ್ನೇಹಾ ಪಿ.ವಿ (ಅಪರಾಧ & ಸಂಚಾರ), ಅರುಣಕುಮಾರ ಕೋಳೂರ ಎಸಿಪಿ ಖಡೇಬಜಾರ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಖಡೇಬಜಾರ ಪೊಲೀಸ್ ಠಾಣೆಯ ಡಿ ಪಿ ನಿಂಬಾಳಕರ, ಪೊಲೀಸ್ ಇನ್ಸಪೇಕ್ಟರ ರವರ ನೇತೃತ್ವದಲ್ಲಿ ಆನಂದ ಆದಗೊಂಡ ಪಿಎಸ್ಐ, ಸಿಬ್ಬಂದಿ ಜನರಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ, ಎಮ್ ವಿ ಅರಳಗುಂಡಿ, ವಿ ವಾಯ್ ಗುಡಿಮೇತ್ರಿ, ಜಿ ಪಿ ಅಂಬಿ, ಆರ್ ಬಿ ಗಣಿ, ಪಿ ಎಸ್ ಮಾದರ ಹಾಗೂ ಬೆಳಗಾವಿ ನಗರ ಟೆಕ್ನಿಕಲ್ ಘಟಕದ ರಮೇಶ ಅಕ್ಕಿ ಮತ್ತು ಎಮ್ ಎಸ್ ಕಾಶೀದ ಇವರು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇವರ ಕಾರ್ಯವನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರಾದ ಎಸ್ ಎನ್ ಸಿದ್ದರಾಮಪ್ಪ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.