ಜನ ಜೀವಾಳ ಜಾಲ ಬೆಳಗಾವಿ: ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ ಬೆಳಗಾವಿ ಅರಣ್ಯ ವೃತ್ತದ ಬೆಳಗಾವಿ ವಿಭಾಗದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾನ್ ನವ್ಹೆಂಬರ್ 23-24- 25ರಂದು ಮೂರು ದಿನ ರಾಜ್ಯದ 13ಅರಣ್ಯ ವೃತ್ತಗಳ ಮತ್ತು 1ಟ್ರೇನಿಂಗ್ ಅಕಾಡೆಮಿಯ ಒಟ್ಟು 14 ಅರಣ್ಯ ಯುನಿಟ್ ಗಳ ಸಿಬ್ಬಂಧಿ ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇಲಾಖೆಯ ಅಧಿಕಾರಿ/ ಸಿಬ್ಬಂಧಿ ಒಟ್ಟು 1100 ಕ್ರೀಡಾಪಟುಗಳು ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ.900 ಜನ ಪುರುಷ ಕ್ರೀಡಾಪಟುಗಳು, 200 ಜನ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ( VTU) ಕ್ಯಾಂಪಸ್ ನಲ್ಲಿ ಮತ್ತು ಬೆಳಗಾವಿ ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಮೂರು ದಿನ ಕ್ರೀಡೆಗಳು ನಡೆಯಲಿವೆ.
ಇಲಾಖೆಯ ಸಿಪಾಯಿ/ ಪಾರೆಸ್ಟರ್ ನಿಂದ ಹಿಡಿದು ಇಲಾಖೆಯ ಮುಖ್ಯಸ್ಥರಾದ ಪಿಸಿಸಿಎಫ್ ವರೆಗೂ ಎಲ್ಲ ರ್ಯಾಂಕ್ ಅಧಿಕಾರಿಗಳು ಕ್ರೀಡೆಯಲ್ಲಿ ಭಾಗವಹಿಸುವರು ಎಂದರು. ಇದೇ ಸಂದರ್ಭ ಕ್ರೀಡಾಕೂಟದ ‘ಲೋಗೊ’ವನ್ನು ಸಿಸಿಎಫ್ ಇದೇ ಸಂದರ್ಭ ಬಿಡುಗಡೆಗೊಳಿಸಿದರು.
ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ ಬೆಳಗಾವಿಯಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ನಗರದಲ್ಲಿ ಸಂಭ್ರಮ ಮೇರೆ ಮೀರಿದೆ.
ಬೆಳಗಾವಿ ಅರಣ್ಯ ವೃತ್ತದ ಡಿಸಿಎಫ್ ಗಳಾದ ಹರ್ಷ ಭಾನು, ಪಿಕೆಎಂ ಪ್ರಶಾಂತ, ಸಿ. ಜಿ. ಮಿರ್ಜಿ, ಅಂಥೋನಿ ಮರಿಯಪ್ಪ, ಎಸ್. ಕೆ. ಗೊರವರ, ಎಸಿಎಫ್ ಗಳಾದ ಸುನಿತಾ ನಿಂಬರಗಿ, ಎಂ. ಬಿ.ಕುಸನಾಳ, ಶಿವರುದ್ರಪ್ಪ ಕಬಾಡಗಿ ಇತರರು ಉಪಸ್ಥಿತರಿದ್ದರು.
ಉದ್ಘಾಟನೆ:
ನವ್ಹೆಂಬರ್ 23ರಂದು ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರಣ್ಯ ಕ್ರೀಡಾಕೂಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಮುಜರಾಯಿ ಹಾಗೂ ಹಜ್ ಸಚಿವರಾದ ಶಶಿಕಲಾ ಜೊಲ್ಲೆ ಆಗಮಿಸುವರು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸುವರು. ವಿಶೇಷ ಆಮಂತ್ರಿತರಾಗಿ ಶಾಸಕರಾದ ಮಹೇಶ ಕಮಟಳ್ಳಿ, ದುರ್ಯೋಧನ ಐಹೊಳೆ, ಪಿ. ರಾಜೀವ ಆಗಮಿಸಲಿದ್ದು, ಜಿಲ್ಲೆಯ ಎಲ್ಲ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆ ಮುಖ್ಯಸ್ತ ರಾಜ ಕಿಶೋರ ಸಿಂಗ್, ಪಿಸಿಸಿಎಫ್ ಗಳಾದ ರಾಜೀವ ರಂಜನ್, ಕುಮಾರ ಪುಷ್ಕರ್, ಪ್ರಾದೇಶಿಕ ಆಯುಕ್ತ ಕೆ. ಪಿ. ಮೋಹನರಾಜ, ಐಜಿಪಿ ಎನ್. ಸತೀಶಕುಮಾರ, ವಿಟಿಯು ಉಪಕುಲಪತಿ ಡಾ. ಎಸ್. ವಿದ್ಯಾಶಂಕರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಮಿಷ್ನರ್ ಡಾ. ಎಂ. ಬಿ. ಬೋರಲಿಂಗಯ್ಯ, ಎಸ್ಪಿ ಡಾ. ಸಂಜೀವ ಪಾಟೀಲ, ಸಿಇಓ ಎಚ್. ವಿ. ದರ್ಶನ ಆಗಮಿಸಲಿದ್ದಾರೆ.
ಕ್ರೀಡೆಗಳ ವಿವರ:
ಒಳಾಂಗಣ:
ಟೇಬಲ್ ಟೆನ್ನಿಸ್
ಬ್ಯಾಡಮಿಂಟನ್
ಕೇರಂ
ಚೆಸ್
ಬಿಲಿಯರ್ಡ್ಸ್
ಸ್ನೂಕರ್ಸ್
ಬ್ರಿಡ್ಜ್ಸ್
ವೇಟ್/ ಪವರ್ ಲಿಫ್ಟಿಂಗ್
ರೈಫಲ್ ಶೂಟಿಂಗ್
ಸ್ವಿಮ್ಮಿಂಗ್
ಸ್ಕ್ವಾಶ್
ಹೊರಾಂಗಣ:
ಅಥ್ಲೆಟಿಕ್ಸ್
ಬಾಸ್ಕೇಟ್ ಬಾಲ್
ವ್ಹಾಲಿಬಾಲ್
ಕಬಡ್ಡಿ
ಕ್ರಿಕೇಟ್
ಹಾಕಿ
ಲಾನ್ ಟೆನ್ನೀಸ್
ಫುಟಬಾಲ್
ಮ್ಯಾರಾಥಾನ್ ರೇಸ್
ಸೈಕ್ಲಿಂಗ್
ಗಾಲ್ಫ್