ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ
(ಆರ್ಎಸ್ಎಸ್) ಮುಂದಿನ ಕಾರ್ಯಸೂಚಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶ ಹೊಂದಿದ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ದ (ABPS) ಬೈಠಕ್ ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರಿನ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಆರಂಭವಾಗಿದೆ.
ಮೂರು ದಿನಗಳ ABPS ಸಭೆಯನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉದ್ಘಾಟಿಸಿದರು.
ಈ ಸಭೆಯು ಮಣಿಪುರದ ಪರಿಸ್ಥಿತಿ ಮತ್ತು ದೇಶದಲ್ಲಿ ‘ಉತ್ತರ-ದಕ್ಷಿಣ ವಿಭಜನೆ’ಯನ್ನು ಸೃಷ್ಟಿಸುವ ಪ್ರಯತ್ನಗಳ ಕುರಿತು ಚರ್ಚಿಸಲಿದೆ ಎಂದು ಆರ್ಎಸ್ಎಸ್ ಜಂಟಿ ಕಾರ್ಯದರ್ಶಿ ಸಿ.ಆರ್. ಮುಕುಂದ ಸಭೆಗೂ ಮುನ್ನ ತಿಳಿಸಿದರು.
2025ರ ವಿಜಯದಶಮಿಗೆ ಆರ್ಎಸ್ಎಸ್ ಸ್ಥಾಪನೆಯಾಗಿ 100 ವರ್ಷ ಪೂರೈಸಲಿದೆ. ನಡೆದು ಬಂದ ಹಾದಿ, ಕ್ರಮಿಸಬೇಕಿರುವ ಪಥಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಈ ವರ್ಷದ ವಿಜಯ ದಶಮಿಯಿಂದ 2026ರ ವಿಜಯ ದಶಮಿವರೆಗೆ ಶತಮಾನ 2025ರಿಂದ 2026ರವರೆಗೆ ಶತಮಾನೋತ್ಸವ ವರ್ಷ ಆಚರಿಸಲಾಗುವುದು ಎಂದರು..