ಸ್ಟಾಕ್ಹೋಮ್ (ಸ್ವೀಡನ್): 2024ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಡಾರೊನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ಎ. ರಾಬಿನ್ಸನ್ ಅವರಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಡೇರಾನ್ ಅಸೆಮೊಗ್ಲು ಮತ್ತು ಸೈಮನ್ ಜಾನ್ಸನ್ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದರೆ, ಜೇಮ್ಸ್ ರಾಬಿನ್ಸನ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿದ್ದಾರೆ. “ಸಂಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಸಮೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ” ಎಂಬ ಅಧ್ಯಯನಕ್ಕಾಗಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. “ದೇಶಗಳ ನಡುವಿನ ಆದಾಯದಲ್ಲಿನ ಅಗಾಧ ವ್ಯತ್ಯಾಸಗಳನ್ನು ಕಡಿಮೆ ಮಾಡುವುದು ನಮ್ಮ ಸಮಯದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಇದನ್ನು ಸಾಧಿಸಲು ಸಾಮಾಜಿಕ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಪ್ರಶಸ್ತಿ ವಿಜೇತರು ಪ್ರದರ್ಶಿಸಿದ್ದಾರೆ” ಎಂದು ಆರ್ಥಿಕ ವಿಜ್ಞಾನಗಳ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಜಾಕೋಬ್ ಸ್ವೆನ್ಸನ್ ಹೇಳಿದ್ದಾರೆ.
“ರಾಜಕೀಯ ಸಂಸ್ಥೆಗಳು ರೂಪುಗೊಳ್ಳುವ ಮತ್ತು ಬದಲಾಗುವ ಸಂದರ್ಭಗಳನ್ನು ವಿವರಿಸುವ ಪ್ರಶಸ್ತಿ ವಿಜೇತರ ಮಾದರಿಯು 3 ಅಂಶಗಳನ್ನು ಹೊಂದಿದೆ. ಸಂಪನ್ಮೂಲಗಳನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ, ಸಮಾಜದಲ್ಲಿ ಯಾರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎನ್ನುವ ಸಂಘರ್ಷ ಮೊದಲನೆಯ ಅಂಶ” ಎಂದು ನೊಬೆಲ್ ಪ್ರಶಸ್ತಿ ಎಕ್ಸ್ (ಹಿಂಡಿನ ಟ್ವಿಟರ್)ನಲ್ಲಿ ತಿಳಿಸಿದೆ.
“ಜನಸಾಮಾನ್ಯರು ಕೆಲವೊಮ್ಮೆ ಆಳುವ ಅಧಿಕಾರ ವರ್ಗ ಬೆದರಿಕೆ ಹಾಕುವ ಅವಕಾಶವನ್ನು ಹೊಂದಿರುತ್ತಾರೆ. ಆದ್ದರಿಂದ ಸಮಾಜದಲ್ಲಿ ಅಧಿಕಾರವು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಗಿಂತ ಹೆಚ್ಚಾಗಿದೆ. ಮೂರನೆಯದು ಬದ್ಧತೆಯ ಸಮಸ್ಯೆ. ಗಣ್ಯರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಜನರಿಗೆ ಹಸ್ತಾಂತರಿಸುವುದು ಇದಕ್ಕಿರುವ ಏಕೈಕ ಪರ್ಯಾಯ ಮಾರ್ಗ” ಎಂದು ಎಕ್ಸ್ನಲ್ಲಿ ವಿವರಿಸಲಾಗಿದೆ.