*ನಾಳೆ ಕಡೂಲಿಯಲ್ಲಿ ಹಿಂದೂ ಸಮ್ಮೇಳನ*
*ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಲಿರುವ ಹಿಂದೂ ಬಾಂಧವರು*
ಬೆಳಗಾವಿ: ಮಾತೃಭೂಮಿ, ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಸಂವರ್ಧನೆಗೆ ಪ್ರತಿಯೊಬ್ಬ ಹಿಂದೂ ಸಂಘಟಿತರಾದಾಗ ಮಾತ್ರ ಸಮಾಜ ಬಲಿಷ್ಠವಾಗುತ್ತದೆ. ಹಿಂದೂ ಪರಂಪರೆ, ಆಚರಣೆ, ಚಿಂತನೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಸಮಸ್ತ ಹಿಂದೂ ಸಮಾಜ ಜಾಗೃತವಾಗಸಲುಮಹತ್ವದ ಉದ್ದೇಶದಿಂದ ನಾಳೆ ಕಡೋಲಿ ಗ್ರಾಮದಲ್ಲಿ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ.
ನಾಳೆ ಮಂಗಳವಾರ (ದಿ 2೦ ಜನವರಿ) ಸಾಯಂಕಾಲ 5 ಗಂಟೆಗೆ ಕಡೋಲಿಯ ಶ್ರೀ ಜ್ಯೋತಿಬಾ ಮಂದಿರದಿಂದ ಶೋಭಾ ಯಾತ್ರೆಗೆ ಚಾಲನೆ ನೀಡುವುದರೊಂದಿಗೆ ಸಮ್ಮೇಳನ ಆರಂಭವಾಗಿ ಶ್ರೀ ದುರದುಂಡೀಶ್ವರ ಮಠ ಕಾರ್ಯಕ್ರಮ ನಡೆಯಲಿದೆ.
ಬೆಳಗಾವಿಯ ಶ್ರೀ ರೂಧ್ರ ಕೇಸರಿ ಮಠದ ಪರಮಪೂಜ್ಯ ಶ್ರೀ ಹರಿ ಗುರು ಮಹಾರಾಜ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಉತ್ತರ ಕರ್ನಾಟಕ ಪ್ರಮುಖರಾದ ಶ್ರೀ ರಾಮಚಂದ್ರ ಎಕಡೇ ಪ್ರಮುಖ ವಕ್ತಾರರಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಹಿಂದೂ ಬಂಧು ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಿಂದೂ ಸಮ್ಮೇಳನ ಸಮಿತಿ ಕಡೋಲಿ ವಿಭಾಗದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


