This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬೆಳಗಾವಿಯಲ್ಲಿ ತೀವ್ರ ಗೊಂದಲ ಸೃಷ್ಟಿಸಿತು ಈ ಸಲದ ರಾಜ್ಯೋತ್ಸವ ಪ್ರಶಸ್ತಿ ! This year's Rajyotsava award created a lot of confusion in Belgaum!


ಬೆಳಗಾವಿ ಜಿಲ್ಲೆಯಲ್ಲಿ ದಿಗ್ಗಜ, ಮೇರು ಸಾಹಿತಿಗಳು, ಸಾಧಕರು. ರಂಗಕರ್ಮಿ ಹಾಗೂ ವಿಶ್ರಾಂತ ಪ್ರಾಚಾರ್ಯ ಬಿ. ಎಸ್. ಗವಿಮಠ, ವಿಶ್ರಾಂತ ಪ್ರಾಚಾರ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಸಾಹಿತಿ ಜಾನಪದ ಸಾಹಿತಿ ಡಾ.ಬಸವರಾಜ ಜಗಜಂಪಿ, 60 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಲ್.ಎಸ್. ಶಾಸ್ತ್ರಿ, ಖ್ಯಾತ ಭಾಷಣಕಾರ, ಸಾಹಿತಿ ಡಾ.ವಿ. ಎಸ್. ಮಾಳಿ ಸೇರಿದಂತೆ ಅತಿರಥರಿಗೆ ಈ ಸಲವೂ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಸೋಜಿಗ.

ಜನ ಜೀವಾಳ ಸರ್ಚ್ ಲೈಟ್ ಬೆಳಗಾವಿ :
ಬೆಳಗಾವಿ ಜಿಲ್ಲೆಗೆ ಈ ಬಾರಿ ಸಿಕ್ಕಿರುವ ರಾಜ್ಯೋತ್ಸವ ಪ್ರಶಸ್ತಿ ತೀವ್ರ ಗೊಂದಲ ಸೃಷ್ಟಿಸಿದೆ.
ಬೆಳಗಾವಿ ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆ. ಸದ್ಯ ಬೆಳಗಾವಿ ಜಿಲ್ಲೆ ಎಂದು ಕರೆಯಲ್ಪಡುವ ಈ ವಿಸ್ತಾರವಾದ ಜಿಲ್ಲೆ ಭವಿಷ್ಯದಲ್ಲಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಅಥಣಿ ಜಿಲ್ಲೆಗಳಾಗಿ ಬೆಳೆಯುವ ಸಾಧ್ಯತೆಯಿದೆ. ಕಾಲಕಾಲಕ್ಕೆ ಈ ಪ್ರದೇಶಗಳಲ್ಲಿ ಹೊಸ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ. ಆದರೆ, ಈ ಬಾರಿಯೂ ಇಷ್ಟು ದೊಡ್ಡ ಜಿಲ್ಲೆಗೆ ಕೇವಲ 5 ಪ್ರಶಸ್ತಿ ನೀಡಿ ಮತ್ತೆ ಸರಕಾರ ಜಾಣ ಕಿವುಡುತನ ಮೆರೆದಿದೆ.

ಪ್ರತಿ ಬಾರಿ ಗಡಿ ಜಿಲ್ಲೆ ಬೆಳಗಾವಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅನ್ಯಾಯವಾಗಿದೆ. ಇದೆನು ಹೊಸದಲ್ಲ. ಆದರೆ ಈ ಬಾರಿ ಐವರಿಗೆ ಪ್ರಶಸ್ತಿ ನೀಡಲಾಗಿದೆ.
ಡಾ.ರಾಮಕೃಷ್ಣ ಮರಾಠೆ ಅವರು ಬಹು ಜನಪ್ರಿಯರು. ಆದರೆ  ಬೇರೆಯವರು ಅಷ್ಟೊಂದು ಪರಿಚಿತರಲ್ಲ.

ಕಿಚಡಿಯಾಯ್ತು ಕಿರಿಕಿರಿ ಹಚ್ಚಡಿ  ಬುಚಡಿ !
ಶಂಕರ ಚಚಡಿ ಹೆಸರಿನವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಜಿಲ್ಲೆಯಲ್ಲಿ ಚಚಡಿ ಎಂಬ ಮೇಧಾವಿ ಸಾಹಿತಿಗಳು ಯಾರೂ ಇಲ್ಲ ಎನ್ನುವುದು   ಸಾಹಿತಿಗಳ ಅಭಿಪ್ರಾಯ. ಆದರೆ, ಶಂಕರ ಚಚಡಿ ಎಂಬ ಬರಹಗಾರರು ಪತ್ರಿಕೆಗಳಿಗೆ ಬರೆಯುತ್ತಿದ್ದರು.  

ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಬುಡಾ) ಮಾಜಿ ಅಧ್ಯಕ್ಷ ಶಂಕರ ಬುಚಡಿ ಅವರಿಗೆ ಪ್ರಶಸ್ತಿ ಲಭಿಸಿದೆಯೋ ಅಥವಾ ಬರಹಗಾರ
ಚಚಡಿಯವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿದೆಯೋ ಎಂಬ ಅಚ್ಚರಿ ಜಿಲ್ಲೆಯ ಸಾಹಿತ್ಯ ವಲಯದಿಂದ ಕೇಳಿ ಬಂದಿದೆ. ರಾಮಕೃಷ್ಣ ಮರಾಠೆ ಹೊರತುಪಡಿಸಿ ಇನ್ನುಳಿದ  ಪ್ರಶಸ್ತಿ ಪುರಸ್ಕೃತ ಸಾಹಿತಿಗಳ  ಪರಿಚಯ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರಿಗೆ ಸಹ ಸಾಹಿತಿಗಳ ಪರಿಚಯವಿಲ್ಲ!

ಈ ಬಾರಿ ಸಾಹಿತ್ಯ ವಲಯದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ತೆರೆಮರೆಯಲ್ಲಿ ಸಾಹಿತ್ಯಕೃಷಿ ಮಾಡಿಕೊಂಡಿರಬಹುದು. ಆದರೆ ಜಿಲ್ಲೆಯಲ್ಲಿ ಘಟಾನುಘಟಿ ಸಾಹಿತಿಗಳಿದ್ದಾರೆ . ಸಾಹಿತ್ಯ ಕೃಷಿಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಕೇಂದ್ರ ಪ್ರಶಸ್ತಿ ನೀಡಬೇಕೆಂದು ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ. ರಂಗಕರ್ಮಿ ಹಾಗೂ ವಿಶ್ರಾಂತ ಉಪನ್ಯಾಸಕ ಡಾ. ರಾಮಕೃಷ್ಣ ಮರಾಠೆ ಅವರಿಗೆ ಸಹ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಸಾಹಿತ್ಯ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತೆರೆಮರೆಯಲ್ಲಿದ್ದು ಪ್ರಚಾರ ಬಯಸದೆ ಸಾಹಿತ್ಯ ಸೇವೆ ಮಾಡುತ್ತಿರುವ ಅವರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸಕಾಲಿಕ. ಆದರೆ ಅವರನ್ನು ಕಲಬುರ್ಗಿ ಕೋಟಾದಡಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ರಾಮಕೃಷ್ಣ ಮರಾಠೆ ಅವರನ್ನು ಸೇರಿಸಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.

ಬೆಳಗಾವಿ ಗಡಿ ಜಿಲ್ಲೆ.  ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರದಲ್ಲಿ ಬಹುದೊಡ್ಡ ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ. ಈ ರಾಜ್ಯದ ಸರ್ಕಾರ ಗಡಿ ಜಿಲ್ಲೆಗೆ ಅಗ್ರ ಪ್ರಾಶಸ್ತ್ಯ ಕೊಡುಗೆ. ರಾಜ್ಯೋತ್ಸವದಲ್ಲಿ ಸತತವಾಗಿ ಆಗುತ್ತಿರುವ ಅನ್ಯಾಯವನ್ನು ಪರಿಗಣಿಸಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ನೀಡುವ ಮೂಲಕ ಅನ್ಯಾಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಸಾಹಿತಿಗಳ ಒಕ್ಕೊರಲ ಆಗ್ರಹವಾಗಿದೆ.

ನಿಜವಾಗಿಯೂ ಆಶ್ಚರ್ಯ. ಕಸಾಪ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿದ ನನಗೆ ವಿಳಾಸ ಸಲ್ಲಿಸಿದ ಜಿಲ್ಲೆಯ ಸಾಹಿತಿಗಳ ಪರಿಚಯ, ಸಂಚಾರ ವಾಣಿಗಳ ಸಂಖ್ಯೆಗಳು ಇವೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಈ ಹೆಸರು ನನಗೆ ಗೊತ್ತಿಲ್ಲ.- ಯ.ರು.ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ

ಊಹಾಪೋಹಗಳಿಗೆ ತೆರೆ ಎಳೆದ ಶಂಕರ ಬುಚಡಿ: ತಮಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭ್ಯ ಬೆಳಗಾವಿಯ ಶಂಕರ ಬುಚಡಿ ಅವರು ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಉಂಟಾಗಿರುವ ಎಲ್ಲ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ಬೆಳಗಾವಿ ಖಾಸಬಾಗ ಪ್ರದೇಶದ ಗಾಯತ್ರಿನಗರದ 79 ವರ್ಷದ ಶಂಕರ ಬುಚಡಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕನ್ನಡ ಹೋರಾಟದಲ್ಲಿ ಅವರು ಇದ್ದರು. ಜೊತೆಗೆ ನೇಕಾರ ಚಳವಳಿಯಲ್ಲಿ ಸಕ್ರಿಯವಾಗಿದೆ. ಕನ್ನಡದಲ್ಲಿ 5 ಹಾಗೂ ಮರಾಠಿಯಲ್ಲಿ 1ಸಂಶೋಧನ ಕೃತಿ ರಚಿಸಿದ್ದಾರೆ.


Jana Jeevala
the authorJana Jeevala

Leave a Reply