ಗೋಕಾಕ :
ಸುಮಾರು 35 ವರ್ಷಗಳಿಂದ ಸಂಘದ ಸ್ವಯಂ ಸೇವಕನಾಗಿ,ಪಕ್ಷದ ಕ್ರೀಯಾಶೀಲ ಕಾರ್ಯಕರ್ತನಾಗಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರುವ ಸಾಮರ್ಥ್ಯ ಹೊಂದಿರುವ,ಉತ್ಸಾಹಿ ಯವ ನಾಯಕ ಚಿದಾನಂದ ದೇಮಶೆಟ್ಟಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ,ಅತ್ಯಾಚಾರ,ಅಕ್ರಮ ಚಟುವಟಿಕೆಯ ವಿರುದ್ಧ ತನ್ನದೇಯಾದ ಗೆಳೆಯರ ಬಳಗದ ಜೊತೆಗೂಡಿ ಪ್ರತಿಭಟಿಸುತ್ತಾ ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿ.
ಇಂತಹ ಹೋರಾಟಗಾರನಿಗೆ, ಸಮಾಜ ಸೇವಕನಿಗೆ ಈ ಭಾರಿ ಗೋಕಾಕ ಮತಕ್ಷೇತ್ರದ ಟಿಕೇಟ್ ನೀಡಬೇಕು ಎನ್ನುವುದು ಅವರ ಬೆಂಬಲಿಗರ ಹಾಗೂ ನಿಷ್ಠಾವಂತ ಕಾರ್ಯಕರ್ತ ಅಭಿಪ್ರಾಯವಾಗಿದೆ.
ಕಾರ್ಯ ಚಟುವಟಿಕೆಗಳು
1987 ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯ,1992 ರಿಂದ ಭಾ,ಜ,ಪ ಸಕ್ರಿಯ ಕಾರ್ಯಕರ್ತ,1994 ರಲ್ಲಿ ಹುಬ್ಬಳ್ಳಿ ಈದ್ಗಾ ವಿವಾದದಲ್ಲಿ ಗೋಕಾಕದಲ್ಲಿ ಸೆರೆಮನೆ ವಾಸ,1997 ರಲ್ಲಿ ಗೋಕಾಕ ನಗರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ,2003 ರಲ್ಲಿ ಗೋಕಾಕ ನಗರಸಭೆ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ,2005 ರಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ ಮಮದಾಪೂರ ಜಿಲ್ಲಾ ಪಂಚಾಯತ ಕ್ಷೇತ್ರಕ್ಕೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆ,
ಸಹಕಾರಿ ಕ್ಷೇತ್ರ 1996 ರಿಂದ ಸರ್ ಎಂ,ವಿಶ್ವೇಶ್ವರಯ್ಯ ವಿವಿಧೊದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ,ಗೋಕಾಕ ಇದರ ಸಂಸ್ಥಾಪಕ ನಿರ್ದೇಶಕ.
ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರ 2004 ರಿಂದ ನೇತಾಜಿ ಎಜ್ಯುಕೇಶನಲ್ & ಸೋಶಿಯಲ್ ವೆಲ್ಫೇರ್ ಸೊಸೈಟಿಯ ಭಾರತೀಯ ವಿದ್ಯಾ ಮಂದಿರ ಪೂರ್ವ ಪ್ರಾಥಮಿಕ,ಪ್ರಾಥಮಿಕ ಹಾಗೂ ಫ್ರೌಢ ಶಾಲೆ,ಗೋಕಾಕದ ಸಂಸ್ಥಾಪಕ ನಿರ್ದೇಶಕ.
ಪಕ್ಷದ ಜವಾಬ್ದಾರಿಗಳು 2001 ರಿಂದ 2004 ಗೋಕಾಕ ಮಂಡಳ ಯುವ ಮೋರ್ಚಾ ಕಾರ್ಯದರ್ಶಿ,2004 ರಿಂದ 2007 ಗೋಕಾಕ ಮಂಡಳ ಯುವ ಮೋರ್ಚಾ ಉಪಾಧ್ಯಕ್ಷ,2007 ರಿಂದ 2010 ಬೆಳಗಾವಿ ಗ್ರಾಮೀಣ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ,2010-13 ಬೆಳಗಾವಿ ಗ್ರಾಮೀಣ ಜಿಲ್ಲಾ ಕೋಶಾಧ್ಯಕ್ಷ,2013-16 ಬೆಳಗಾವಿ ಗ್ರಾಮೀಣ ಜಿಲ್ಲಾ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಂಚಾಲಕ,2016-19 ಬೆಳಗಾವಿ ಗ್ರಾಮೀಣ ಜಿಲ್ಲಾ ವಿಶೇಷ ಆಮಂತ್ರಿತ,2019 ರಿಂದ ಬೆಳಗಾವಿ ಗ್ರಾಮೀಣ ಜಿಲ್ಲಾ ಇ-ಪ್ರಶಿಕ್ಷಣ ಸಹಸಂಚಾಲಕ,ಹಾಗೂ ಬೆಳಗಾವಿ ಗ್ರಾಮೀಣ ಪ್ರಣಾಳಿಕೆ ಸಲಹಾ ಸಮಿತಿ ಸಹಸಂಚಾಲಕ 2023 ಚುನಾವಣಾ ಜವಾಬ್ದಾರಿ ಸಹ ಪಕ್ಷ ಇವರಿಗೆ ನೀಡಿರುತ್ತದೆ.