ಬೆಳಗಾವಿ: ಬೆಳಗಾವಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಇತ್ತೀಚಿಗೆ ಆಗಮಿಸಿರುವ ಯುವ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಅವರು ತಾವೊಬ್ಬ ಅತ್ಯುತ್ತಮ ಆಡಳಿತಗಾರರಷ್ಟೇ ಅಲ್ಲ, ಶ್ರೇಷ್ಠ ಗಾಯಕರು ಹೌದು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಇದೀಗ ಅವರು ಎಂದೋ ಮೈಮರೆತು ಹಾಡಿದ ಸನ್ನಿವೇಶ ಬಂದು ಭಾರಿ ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಇತ್ತೀಚಿಗಷ್ಟೇ ಹೊಸ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಲೇ ಅವರು ತಾವೊಬ್ಬ ದಕ್ಷ ಅಧಿಕಾರಿ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.
ಬೆಳಗಾವಿ ಅತ್ಯಂತ ರಾಜ್ಯದಲ್ಲೇ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಆದರೆ, ಸರಕಾರ ಇಂಥ ದೊಡ್ಡ ಜಿಲ್ಲೆಗೆ ತಮ್ಮನ್ನು ನೇಮಕ ಮಾಡಿರುವುದನ್ನು ಅವರು ಸವಾಲಾಗಿ ಸ್ವೀಕರಿಸಿದ್ದು ಪ್ರಸ್ತುತ ಎದುರಾಗಿರುವ ಮಳೆ ಹಾನಿ ಸೇರಿದಂತೆ ಪ್ರಮುಖ ಸಮಸ್ಯೆ ಪರಿಹರಿಸುವಲ್ಲಿ ಅವರು ಪಾದರಸದಂತೆ ಎಲ್ಲೆಡೆ ಸಂಚರಿಸಿ ಜನರ ಧ್ವನಿಯಾಗುತ್ತಿದ್ದಾರೆ. ಇದೀಗ ಅವರು ಹಾಡಿರುವ ಸುಮಧುರ ಗೀತೆಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಇದುವರೆಗೆ ಅವರು ಗಾಯಕರು ಎನ್ನುವುದು ಬೆಳಗಾವಿ ಜಿಲ್ಲೆಯ ಜನತೆಗೆ ತಿಳಿದಿರಲಿಲ್ಲ. ಆದರೆ, ಅವರು ಹಾಡಿದ ದೃಶ್ಯ ವೈರಲ್ ಆಗುತ್ತಿದ್ದಂತೆ ಇಡೀ ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಎಸ್ ಅಧಿಕಾರಿಯಾಗಿದ್ದರೂ ಹಾಡಲು ಯಾವುದೇ ಕಟ್ಟುಪಾಡು ಇಲ್ಲ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ ಮಾತ್ರವಲ್ಲ ಸಂಗೀತಪ್ರಿಯರ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಯಾಗಿ ಹೊರಹೊಮ್ಮಿದ್ದಾರೆ.