ಬೆಳಗಾವಿ:
ಬೆಳಗಾವಿ ನಗರದ ರಸ್ತೆ ಸಂಚಾರ ಸುರಕ್ಷತೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಾಗೂ ಸುಧಾರಣಾ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಬೆಳಗಾವಿ ನಗರದ ಕಚೇರಿ ಗಲ್ಲಿ ರಸ್ತೆಯನ್ನು ಅಂದರೆ ಉತ್ತರದಿಂದ ದಕ್ಷಿಣಕ್ಕೆ ಬಡಕಲಗಲ್ಲಿ ಕ್ರಾಸ್ ವರೆಗೆ ಏಕಮುಖ ರಸ್ತೆ ಸಂಚಾರವನ್ನಾಗಿ ಮಾಡಲಾಗುವುದು. ಶನಿವಾರ ಕೂಟದಿಂದ ಕಚೇರಿಗಲ್ಲಿಯ ಮಾರ್ಗವಾಗಿ ನಾಲ್ಕು ಚಕ್ರದ ಮತ್ತು 3 ಚಕ್ರದ ವಾಹನಗಳು ಬಡಕಲಗಲ್ಲಿ ಕ್ರಾಸ್ ವರಗೆ ಬರುವುದಾಗಿದ್ದು ನಂತರ ಬಡಕಲ್ ಗಲ್ಲಿಯಿಂದ ನಿರ್ಗಮಿಸಬಹುದಾಗಿದೆ.
ಈ ಪ್ರಸ್ತಾವಣೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ.
ಬೆಳಗಾವಿ ನಗರ ರಸ್ತೆ ಸಂಚಾರ ಸುರಕ್ಷತೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಸುವ ಹಾಗೂ ಸುಧಾರಣೆ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಬೆಳಗಾವಿ ನಗರದ ಕಚೇರಿ ಗಲ್ಲಿ ರಸ್ತೆಯನ್ನು ಅಂದರೆ ಉತ್ತರದಿಂದ ದಕ್ಷಿಣಕ್ಕೆ ಬಡಕಲ ಗಲ್ಲಿ ಕ್ರಾಸ್ ವರೆಗೆ ಏಕಮುಖ ರಸ್ತೆ ಸಂಚಾರವನ್ನಾಗಿ ಮಾಡಲಾಗಿದೆ. ಶನಿವಾರ ಕೂಟದಿಂದ ಕಚೇರಿಗಲ್ಲಿಯ ಮಾರ್ಗವಾಗಿ ನಾಲ್ಕು ಚಕ್ರದ ಮತ್ತು 3 ಚಕ್ರದ ವಾಹನಗಳು ಬಡಕಲಗಲ್ಲಿ ಕ್ರಾಸ್ ವರಗೆ ಬರುವುದಾಗಿದ್ದು ನಂತರ ಬಡಕಲ್ ಗಲ್ಲಿಯಿಂದ ನಿರ್ಗಮಿಸಬೇಕಾಗುತ್ತದೆ. ಈ ನಿರ್ಬಂಧವು ಎರಡು ಚಕ್ರದ ವಾಹನಗಳಿಗೆ ಅನ್ವಯಿಸುವದಿಲ್ಲ.
ಈ ಆದೇಶವನ್ನು ಈ ದಿನ ಅಂದರೆ ದಿನಾಂಕ: 04/11/2025 ರಂದು ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಇವರು ತಿಳಿಸಿದ್ದಾರೆ.

            
        
        
        
 
        