- ಬೆಳಗಾವಿಯಲ್ಲಿ ಹಾಡಹಗಲೇ ನಡೆಯುತ್ತಿದೆ ಚಾಣಾಕ್ಷ ಕಳ್ಳತನ..!
- ಸಾರ್ವಜನಿಕರು ಜಾಗೃತರಾಗಿರಿ 112ಗೆ ಕರೆ ಮಾಡಿ: ಡಿಸಿಪಿ ಪಿ.ವಿ. ಸ್ನೇಹಾ..!
ಜನ ಜೀವಾಳ ಜಾಲ: ಬೆಳಗಾವಿ : ನಗರದಲ್ಲಿನ ಕಳ್ಳರು ಚಾಣಾಕ್ಷರಾಗಿದ್ದು ಏಕಾಂಗಿಯಾಗಿದ್ದ ವೃದ್ಧೆಯೊಬ್ಬರನ್ನು ಗುರಿಯಾಗಿಸಿಕೊಂಡು ನಾವು ಪೊಲೀಸರು ಇಲ್ಲಿ ಕಳ್ಳರಿದ್ದಾರೆ. ನಿಮ್ಮ ಒಡವೆಗಳನ್ನು ಕದಿಯಬಹುದು. ಅವುಗಳನ್ನು ಸುರಕ್ಷಿತವಾಗಿ ಬಟ್ಟೆಯಲ್ಲಿ ಕಟ್ಟಿ ಕೊಡುವುದಾಗಿ ಹೇಳಿ ಆ ಬಟ್ಟೆಯಲ್ಲಿ ಕಲ್ಲು ಹಾಕಿ ಕೊಟ್ಟು ವೃದ್ಧೆಯ ಲಕ್ಷಾಂತರ ರೂ ಮೌಲ್ಯದ ಒಡವೆಗಳನ್ನು ಲಪಟಾಯಿಸುವಲ್ಲಿ ಲಫಂಗ ಕಳ್ಳರು ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿರುವ ಮಹಿಳೆಯರನ್ನು ಕಂಡ ಖದೀಮ ಕಳ್ಳರು ನಾವು ಪೊಲೀಸರು, ಇಲ್ಲಿ ಕಳ್ಳರಿದ್ದಾರೆ. ನೀವು ನಿಮ್ಮ ಚಿನ್ನಾಭರಣಗಳನ್ನು ಹಾಕಿಕೊಂಡು ಓಡಾಡುವ ಹಾಗಿಲ್ಲ ಅವುಗಳನ್ನು ತೆಗೆದು ನಮಗೆ ಕೊಡಿ, ನಾವು ಬಟ್ಟೆಯಲ್ಲಿ ಹಾಕಿ ಕಟ್ಟಿ ಕೊಡುತ್ತೇವೆ ಎಂದು ನಂಬಿಸಿ ಆಭರಣಗಳನ್ನು ತೆಗೆದುಕೊಂಡು ನಂತರ ಆ ಬಟ್ಟೆಯಲ್ಲಿ ಚಿನ್ನದ ತೂಕದಷ್ಟೇ ಕಲ್ಲುಗಳನ್ನು ಹಾಕಿ ಮಹಿಳೆಗೆ ಕೊಟ್ಟು ಬೇಗ ಇಲ್ಲಿಂದ ಓಡಿ ಹೋಗಿ ಎಂದು ಹೇಳಿ ಸುಮಾರು 70 ಗ್ರಾಂ ಚಿನ್ನದ ಸರವನ್ನು ಕಳ್ಳರು ಚಾಣಾಕ್ಷತನದಿಂದ ಎಗರಿಸಿರುವ ಘಟನೆ ಬೆಳಗಾವಿ ನಗರದ ಆಂಜನೇಯ ನಗರದಲ್ಲಿರುವ ಕೆ.ಎಂ.ಎಫ್(KMF)ಡೈರಿ ಬಳಿ ನಿನ್ನೆ ನಡೆದಿದೆ.
ಈ ಘಟನೆ ಕಳ್ಳತನಕ್ಕೆ ಪ್ರಸಿದ್ಧಿಯಾಗಿರುವ ಪ್ರದೇಶಗಳನ್ನು ಹೊಂದಿರುವ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡದಿದೆ. ಆದರೆ 72 ವಯಸ್ಸಾಗಿರುವ ವೃದ್ಧ ಮಹಿಳೆ ಈ ಕುರಿತು ಮಾಹಿತಿ ಮಾತ್ರ ನೀಡಿದ್ದು, ಬಹುಶಃ ಹೆದರಿ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿರುವುದಾಗಿ ತಿಳಿದು ಬಂದಿದೆ.
ಸಾರ್ವಜನಿಕರಿಗೆ ಜಾಗೃತರಾಗಿರುವಂತೆ ಮನವಿ ಮಾಡಿದ ಡಿಸಿಪಿ ಪಿ ವಿ ಸ್ನೇಹಾ..!: ಈ ಘಟನೆ ನಿನ್ನೆ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂತಹ ಕಳ್ಳರು ಬೆಳಗಾವಿ ನಗರದಲ್ಲಿ ಎಲ್ಲಾ ಕಡೆ ಬಂದು ನಾವು ಪೊಲೀಸರು ಎಂದು ನಂಬಿಸಬಹುದು. ಆದರೆ ನಾಗರಿಕರು ಇಂತಹ ಯಾವುದೇ ಮಾತುಗಳಿಗೆ ಮರುಳಾಗದೆ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಬೆಳಗಾವಿ ನಗರ ಆಯುಕ್ತ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.