ಬೆಳಗಾವಿ:
ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ನಿವೃತ್ತ ಶಿಕ್ಷಕಿಯ ಮನೆಯಲ್ಲಿದ್ದ 70 ಗ್ರಾಂ ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಹಣವನ್ನು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಕಣಗಲಾ ಗ್ರಾಮದಲ್ಲಿ ತಡರಾತ್ರಿ ಖದೀಮರ ತಂಡ ಅಕ್ಕ ಪಕ್ಕದ ಮನೆಗಳಿಗೆ ಹೊರಗಡೆಯಿಂದ ಬಾಗಿಲಿಗೆ ಬೀಗ ಹಾಕಿ ನಿವೃತ್ತ ಶಿಕ್ಷಕಿ ಆಶಾ ಮೋಹಿತೆ ಎಂಬುವರ ಮನೆಗೆ ಹಾಕಲಾಗಿದ್ದ ಬೀಗ ಮುರಿದು ಮನೆಯಲ್ಲಿನ ಕಪಾಟಿನಲ್ಲಿ ಇರಿಸಲಾಗಿದ್ದ ಸುಮಾರು 70 ಗ್ರಾಂ (7 ತೊಲೆ) ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸಂಕೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿದ್ದು ಖದೀಮರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದಾರೆ.