ನರಸಿಂಗಪೂರದಲ್ಲಿ ರಾತ್ರಿ ಆರು ಮನೆಗಳ್ಳತನ..!
ಯಮಕನಮರಡಿ ಪೊಲೀಸರಿಗಿಂತ ಚಾಣಾಕ್ಷರಾದ ಕಳ್ಳರು..?
ಮಾಯವಾದ ನೈಟ್ ಪೆಟ್ರೋಲಿಂಗ್, ಬೀಟ್ ವ್ಯವಸ್ಥೆ..?
ಅವ್ಯಾಹತವಾಗಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳು..?
ಬೆಳಗಾವಿ : ನಿನ್ನೆ ತಡರಾತ್ರಿ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನರಸಿಂಗಪೂರ ಗ್ರಾಮದಲ್ಲಿ 6 ಕ್ಕೂ ಹೆಚ್ಚು ಮನೆಗಳ್ಳತನವಾಗಿವೆ. ಈ ವೇಳೆ ಖದಿಮ ಕಳ್ಳರು ಲಕ್ಷಾಂತರ ರೂ ಚಿನ್ನಾಭರಣ, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ನರಸಿಂಗಪೂರ ಗ್ರಾಮದ ಅಕ್ಕಪಕ್ಕದ ಎರಡು ಗಲ್ಲಿಗಳಾದ ಅಂಬೇಡ್ಕರ್ ಗಲ್ಲಿ ಹಾಗೂ ಪಾಟೀಲ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ಹಾಗೂ ನಸುಕಿನ ಸಮಯದಲ್ಲಿ ಈ ಕಳ್ಳತನಗಳಾಗಿವೆ. ಯಾರು ಇಲ್ಲದ ಮನೆಗಳನ್ನೇ ಗುರುತಿಸಿ ಪ್ಲ್ಯಾನ್ ಮಾಡಿ ಕಳ್ಳತನ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.
ಅವ್ಯಾಹತವಾಗಿ ನಡೆಯುತ್ತಿರುವ ಕಳ್ಳತನ..?
ಖಡಕ ಎಸ್ಪಿ ಆಗಿರುವ ಭಿಮಾಶಂಕರ ಗುಳೇದ ಅವರು ತಾವು ಬಂದಾಗಿನಿಂದ ಜಿಡ್ಡು ಹಿಡಿದಿದ್ದ ಜಿಲ್ಲಾ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಮುಲಾಜಿಲ್ಲದೆ ಕ್ರಮ ಕೈಕೊಂಡು ಸರಿ ದಾರಿಗೆ ತಂದಿದ್ದಾರೆ. ಆದರೆ ಯಮಕನಮರಡಿ ಪೊಲೀಸರು ಮಾತ್ರ ತಮ್ಮ ಹಳೆಯ ಚಾಲಿಯನ್ನೆ ಮುಂದುವರಿಸಿದ್ದು, ಇಲ್ಲಿನ ಬೀಟ್ ಪೊಲೀಸ ವ್ಯವಸ್ಥೆ ದಾಭಾಗಳಿಗೆ ಮಾತ್ರ ಸಿಮಿತವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಠಾಣೆ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಬೈಕ, ಪಂಪ್ ಸೇಟ್, ಕೆಬಲ್ , ಪೈಪ್ ಗಳು, ಮೋಟಾರ್, ಜಾನುವಾರು, ಮನೆಗಳ್ಳತನಗಳು ನಡೆಯುತ್ತವೆ. ಇದರ ಬಗ್ಗೆ ಪ್ರಕರಣ ದಾಖಲಿಸಲು ಹೋದ ಪಿರ್ಯಾಧಿದಾರರನ್ನೆ ಹದರಿಸಿ ಕಳಿಸುವ ಕೇಲಸ ಇಲ್ಲಿನ ಪೊಲೀಸರು ಮಾಡುತ್ತಾರೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.