ಬೆಳಗಾವಿ : ಹಿರೇಬಾಗೇವಾಡಿ ಗ್ರಾಮದಲ್ಲಿ ಇತ್ತೀಚೆಗೆ 10 ಲಕ್ಷ ರೂಪಾಯಿ ಇದ್ದ ಬ್ಯಾಗ್ ಕಳ್ಳತನ ಆಗಿದೆ.
ಹಿರೇ ಬಾಗೇವಾಡಿ ಗ್ರಾಮದ ಪೇಟೆ ಓಣಿಯಲ್ಲಿ ಸ್ಟಾರ್ ಗುಟುಕ ಮಾರುವ ಸೇಲ್ಸ್ ಮನ್ ವಾಹನ ಸಮೇತ ಬಂದು ಆತನು ಅಂಗಡಿಗೆ ಹೋಗಿ ಸ್ಟಾರ್ ಗುಟುಕ ಪಾಕೆಟ್ ಗಳನ್ನು ಕೊಡುತ್ತಿರುವಾಗ ವಾಹನದಲ್ಲಿ ಇಟ್ಟಿರುವ 10 ಲಕ್ಷ ರೂಪಾಯಿ ಇರುವ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಹಿರೇ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಹೆಚ್ಚಳ : ಒಂದು ವಾಹನ ಸೈಕಲ್ ಮೋಟಾರ್ ಕಳ್ಳತನವಾಗಿದ್ದು ಪರಿಸರದಲ್ಲಿ ಈ ಒಂದು ತಿಂಗಳಲ್ಲಿ ಸಾಕಷ್ಟು ಕಳವು ಪ್ರಕರಣಗಳು ಆಗುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ.
ಈ ಒಂದು ತಿಂಗಳಲ್ಲಿ ಸಾಕಷ್ಟು ಮೋಟರ್ ಸೈಕಲ್ ಗಳು ಮನೆಗಳ ಕಳ್ಳತನ ಅಂಗಡಿಗಳ ಕಳ್ಳತನ ಗುಡಿಗಳ ಕಳ್ಳತನ ನಡೆದಿರುತ್ತವೆ ಇದರಿಂದ ಗ್ರಾಮದ ಜನತೆ ಭಯಭೀತರಾಗಿರುತ್ತಾರೆ.