ಬೆಳಗಾವಿ : ವಡಗಾವಿ ಡೋರ ಗಲ್ಲಿಯ ಮನೆಯಲ್ಲಿ ವೃದ್ದೆಯರು ಮಾತ್ರ ವಾಸಿಸುತ್ತಾರೆ. ಇದನ್ನು ಗಮನಿಸಿದ ಕಳ್ಳ ಮನೆಯೊಳಗೆ ನುಗ್ಗಿ ನಾನೊಬ್ಬ ಕೇಬಲ್ ಆಪರೇಟರ್. ನಿಮ್ಮ ಮನೆಯ ಮೊದಲ ಮಹಡಿಯಲ್ಲಿ ಇರುವ ವೈರ್ ಚೆಕ್ ಮಾಡಬೇಕು ಎಂದು ಅವರ ಮನವೊಲಿಸಿದ್ದಾನೆ. ಆಗ ವೃದ್ದೆಯರಾದ ಹೀರಾಬಾಯಿ ಶೇರೆಕಾರ ಮತ್ತು ಮಂಜುಳಾ ಶೇರೇಕಾರ ಅವರು ನಿಜ ಎಂದು ನಂಬಿ ಆತನನ್ನು ಮೊದಲ ಮಹಡಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಮನೆಯಲ್ಲಿ ಇತರರು ಯಾರು ಇಲ್ಲ ಎಂದು ಗಮನಿಸಿದ ಆತ ವೃದ್ದೆಯ ಕೊರಳಲ್ಲಿ ಇದ್ದ ಒಂದೂವರೆ ತೊಲೆ ಬಂಗಾರದ ಸರ ಕದ್ದು ಪರಾರಿಯಾಗಿದ್ದಾನೆ.
ಈ ದೃಶ್ಯಾವಳಿ ಈಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವರ ಮಕ್ಕಳು ವಿದೇಶದಲ್ಲಿದ್ದಾರೆ. ಇವರ ಅಳಿಯ ಕುಮಾರ ಕದಂ ಅವರು ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.