ಮಧ್ಯರಾತ್ರಿ ದೇವಗಿರಿ ಕೆರೆಯಲ್ಲಿನ ಮಣ್ಣು ಕದಿಯುತ್ತಿದ್ದ ಕಳ್ಳರನ್ನು ಹಿಡಿದ ಯುವಕರು..!
1 JCB 3 ಟಿಪ್ಪರ ವಶಕ್ಕೆ ಪಡೆದ ಕಾಕತಿ ಪೊಲೀಸರು ..!
ಸ್ಥಳಕ್ಕೆ ಬಾರದ ಗ್ರಾ ಪಂ ಸದಸ್ಯರು, ಮಣ್ಣು ಮಾಫಿಯಾ ಹಿಂದಿರೋ ರಾಜಕಾರಣಿ ಯಾರು..?
ಬೆಳಗಾವಿ : ನಗರಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಗ್ರಾಮವಾದ ದೇವಗಿರಿಯ ಕೆರೆಯಲ್ಲಿನ ಫಲವತ್ತಾದ ಹಾಗೂ ಕಟ್ಟಡಗಳಿಗೆ ಅತಿಯಾಗಿ ಉಪಯುಕ್ತತೆಗೆ ಬರುವ ಮೋರಮ ನಮೂನೆ ಮಣ್ಣನ್ನು ಕಳ್ಳ, ಖದಿಮರು ರಾತ್ರಿ ವೇಳೆ ಬಂದು ಎರಡು ಜೆಸಿಬಿ, 3 ಟಿಪ್ಪರ ಬಳಸಿ ಕದ್ದು ತುಂಬಿಕೊಂಡು ಸಾಗಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಹಾಗೂ ಯುವಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಈ ಮಣ್ಣು ಮಾಫಿಯಾ ಹಲವು ದನಗಳಿಂದ ನಡೆಯುತ್ತಿದ್ದು, ಲಕ್ಷಾಂತರ ರೂ ಮಣ್ಣನ್ನು ಕದ್ದಿರುವುದಾಗಿ ಗ್ರಾಮಸ್ಥರು ಆರೋಪಿದ್ದಾರೆ.
ಈ ದಂಧೆಯ ಹಿಂದೆ ಅಲ್ಲಿನ ಸ್ಥಳಿಯ ರಾಜಕಾರಣಿಳ ಕೈವಾಡವಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಈ ಘಟನೆ ನಡೆದು ಘಂಟೆಗಳು ಕಳೆದರೂ ಗ್ರಾಮಸ್ಥರು ಅವರಿಗೆ ಮಾಹಿತಿ ನೀಡಿದ ಮೇಲೆಯೂ ಯಾವೊಬ್ಬ ಸದಸ್ಯನು ಕೂಡಾ ಸ್ಥಳಕ್ಕೆ ಬಂದಿಲ್ಲ. ಇವರಿಂದಾಗಿ ಇದರ ಹಿಂದೆ ಇರುವವರ ಯಾರು ಎಂದು ಗ್ರಾಮಸ್ಥರಿಗೆ ಅರಿವಾಗಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕಾಕತಿ ಪಿಎಸ್ಐ ರವಿ, ಸಿಬ್ಬಂದಿ ಬಲ್ಲಾಳ , ದೊಡಮನಿ ಸ್ಥಳಕ್ಕೆ ಧಾವಿಸಿ ಮಣ್ಣು ಕದಿಯಲು ಬಳಸುತ್ತಿದ್ದ 1ಜೆಸಿಬಿ, 3ಟಿಪ್ಪರಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಜೆಸಿಬಿಯನ್ನು ತೆಗೆದುಕೊಂಡು ಚಾಲಕ ಪರಾರಿಯಾಗಿದ್ದಾನೆ.
ಚುನಾವಣೆ ಸಮಯದಲ್ಲಿ ಈ ಪ್ರಕರಣ ಯಾವ ರೀತಿ ತಿರುವು ಪಡೆಯುತ್ತದೆ ಎಂದು ಪೊಲೀಸರು ಕೈಗೊಳ್ಳುವ ಕಾನೂನು ಕ್ರಮದ ಮೇಲೆ ನಿಂತಿದೆ.