ಬೆಳಗಾವಿ: ದರೂರ ಸೇತುವೆ ಮೇಲಿನಿಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರವಿವಾರ ನಡೆದಿದೆ. ಕೃಷ್ಣಾ ನದಿಗೆ ಮಹಿಳೆ ದರೂರ ಸೇತುವೆ ಮೂಲಕ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಶೇಗುಣಸಿ ಗ್ರಾಮದ ಪ್ರಶಾಂತ ಗಸ್ತಿ, ನದಿಗೆ ಹಾರಿ ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಮಹಿಳೆ ಅಥಣಿ ತಾಲೂಕಿನ ತೀರ್ಥ ಗ್ರಾಮದವರು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಮಹಿಳೆಯನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ಕೃಷ್ಣೆಗೆ ಜಿಗಿದ ಮಹಿಳೆ : ನದಿಗೆ ಹಾರಿ ರಕ್ಷಣೆ ಮಾಡಿದ ಯುವಕ
