ರಾಯಚೂರು : ಫೋಟೋ ತೆಗೆದುಕೊಳ್ಳುವ ನಾಟಕವಾಡಿ, ಪತಿಯನ್ನು ಸೇತುವೆ ಬಳಿ ಕರೆದೊಯ್ದ ಪತ್ನಿ ಬಳಿಕ ಪತಿಯನ್ನು ತಾನೇ ನದಿಗೆ ತಳ್ಳಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಈ ಘಟನೆ ನಡೆದಿದೆ. ಪತಿ-ಪತ್ನಿ ಬೈಕ್ ನಲ್ಲಿ ಸೇತುವೆ ಬಳಿ ಬಂದಿದ್ದಾರೆ. ಮೊದಲು ಪತ್ನಿ ಸೇತುವೆ ಬಳಿ ನಿಂತು ತನ್ನ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಬಳಿಕ ಪತಿ ಬಳಿ ಇಬ್ಬರೂ ಸೇರಿ ಫೋಟೋ ತೆಗೆದುಕೊಳ್ಳೋಣ ಎಂದು ಕರೆದೊಯ್ದು ಫೋಟೋ ತೆಗೆದುಕೊಳ್ಳುವ ನಾಟಕವಾಡಿದ್ದಾಳೆ. ಪತಿಯನ್ನು ಸೇತುವೆ ತುಡಿಯಲ್ಲಿ ನಿಲ್ಲಿಸಿ ಫೋಟೋ ತೆಗೆಯುವ ಡ್ರಾಮಾ ಮಾಡಿ ಏಕಾಏಕಿ ನದಿಗೆ ತಳ್ಳಿದ್ದಾಳೆ.
ಕೃಷ್ಣಾ ನದಿಗೆ ಬಿದ್ದ ವ್ಯಕ್ತಿ ನೀರಿನ ಹರಿವಲ್ಲಿ ಕೆಲ ದೂರ ಕೊಛ್ಛ್ಜಿ ಹೋಗಿದ್ದಾನೆ. ಆತನಿಗೆ ಈಜು ಬರುತ್ತಿದುದರಿಂದ ನದಿಯಲ್ಲಿ ಈಜಿ ನದಿ ಮಧ್ಯೆ ಇರುವ ಬಂಡೆ ಏರಿ ಕುಳಿತು ತನ್ನನ್ನುರಕ್ಷಿಸುವಂತೆ ಮೊರೆ ಇಟ್ಟಿದ್ದಾನೆ. ವ್ಯಕ್ತಿ ಕಿರುಚಾಟ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಗ್ಗಕಟ್ಟಿ ಆತ್ನನ್ನು ರಕ್ಷಿಸಿದ್ದಾರೆ. ಪತ್ನಿಯೇ ತನ್ನನು ನದಿಗೆ ತಳ್ಳಿದ್ದಾಳೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಆದರೆ ಪತಿ ಸುಳ್ಳು ಹೇಳುತ್ತಿದ್ದು, ಆತನೇ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎಂದು ಪತ್ನಿ ವಾದಿಸಿದ್ದಾಳೆ. ಸದ್ಯ ನದಿಗೆ ಬಿದ್ದ ವ್ಯಕ್ತಿ ಬಚಾವ್ ಆಗಿದ್ದಾರೆ.