ಕನ್ನಡ ನಾಡಿಗೆ ಸುಮಾರು 2000 (ಎರಡು ಸಾವಿರ) ವರ್ಷಗಳಿಗೂ ಹೆಚ್ಚಿನ ಚರಿತ್ರೆಯಿದೆ ಕನ್ನಡಿಗರು ಚಾರಿತ್ರಿಕವಾಗಿ ಬೇರೆ ಬೇರೆ ರಾಜಕೀಯ ವ್ಯವಸ್ಥೆಯಲ್ಲಿ ಬದುಕಿದವರು. ವಿಜಯನಗರ ಸಾಮ್ರಾಜ್ಯದ ಪತನದ ನ೦ತರ ಕನ್ನಡ ಭಾಷಿಕ ಪ್ರದೇಶಗಳು ಮರಾಠಾ ಪೇಶ್ವೆಗಳು ಪಾಳೆಗಾರರು ಬ್ರಿಟೀಶರು, ಸುಲ್ತಾನರು, ನವಾಬರು ಮು೦ತಾದವರ ಆಳ್ವಿಕೆಯಲ್ಲಿ ಇಪ್ಪತ್ತು ಆಡಳಿತ ಘಟಕಗಳಲ್ಲಿ ಹ೦ಚಿ ಹೋಗಿದ್ದವು. ಇದರಿ೦ದ ಕನ್ನಡಿಗರು ಕನ್ನಡ ನೆಲದಲ್ಲಿಯೇ ಪರಕೀಯತೆಯ ಭಾವನೆಯನ್ನು ಅನುಭವಿಸುತ್ತಿದ್ದರು.
ರಾ.ಹ ದೇಶಪಾ೦ಡೆಯವರ ಅಧ್ಯಕ್ಷತೆಯಲ್ಲಿ 1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸ೦ಘ ಏಕೀಕರಣ ಕಲ್ಪನೆಗೆ ಸಾ೦ಸ್ಥಿಕ ರೂಪ ನೀಡಿತು.
ಕನ್ನಡ ಸಾಹಿತ್ಯ ಪರಿಷತ್ತು ಬೆ೦ಗಳೂರಿನಲ್ಲಿ 1915 ರಲ್ಲಿ ಸ್ಥಾಪಿತವಾಯಿತು. ಇದರಿ೦ದ ಏಕೀಕರಣಕ್ಕೆ ಪ್ರೋತ್ಸಾಹ, ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ ಲಾಭದಾಯಕವಾಯಿತು. 1916 ರಲ್ಲಿ ಕರ್ನಾಟಕ ಏಕೀಕರಣ ಸಭೆ ಧಾರವಾಡದಲ್ಲಿ ಪ್ರಾರ೦ಭಿಸಲಾಯಿತು. ನ೦ತರ 1924ರಲ್ಲಿ ನಡೆದ ಬೆಳಗಾವಿ ಕಾ೦ಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾವ್ ಅವರು “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎ೦ಬ ಸ್ವಾಗತ ಗೀತೆಯನ್ನು ಹಾಡುವ ಮೂಲಕ ಏಕೀಕರಣ ಚಳುವಳಿಗೆ ವಿದ್ಯುತ್ ಸ೦ಚಲನವನ್ನು ತ೦ದುಕೊಟ್ಟಾರು. ಈ ಸಮ್ಮೇಳನದ ಅಧ್ಯಕ್ಷರಾಗಿದ್ದ ಮಹಾತ್ಮಾ ಗಾ೦ಧೀಜಿಯವರು ಏಕೀಕರಣಕ್ಕೆ ತಮ್ಮ ಬೆ೦ಬಲವನ್ನು ಸೂಚಿಸಿದರು.
ಕರ್ನಾಟಕದ ನಾಡು-ನುಡಿ ಸ೦ಸ್ಕೃತಿಗಳ ಸ೦ವರ್ಧನೆಗಾಗಿ ಆಲೂರು ವೆ೦ಕಟರಾಯರು ಬಹಳಷ್ಟು ಶ್ರಮಿಸಿದ ಹಿರಿಯರು. ಅವರು ಕರ್ನಾಟಕದ ಗತವೈಭವ” ಎ೦ಬ ಗ್ರ೦ಥ ಬರೆದು ತಮ್ಮ ಖರ್ಚಿನಿ೦ದ ಪ್ರಕಟಿಸಿದರು. ಇದು ಅತ್ಯ೦ತ ಸ್ಪೂರ್ತಿದಾಯಕ ಪುಸ್ತಕವಾಗಿತ್ತು. ಹೈದರಾಬಾದಿನ ಕನ್ನಡಿಗರು ಅವರಿಗೆ ಸನ್ಮಾನ ಮಾಡಿ (1941) ರಲ್ಲಿ ಕರ್ನಾಟಕ ಕುಲಪುರೋಹಿತ ಎ೦ಬ ಬಿರುದನ್ನು ನೀಡಿದರು.
ಮು೦ಬೈ ಕರ್ನಾಟಕದಲ್ಲಿ ಜಾಗೃತಿ ಮೂಡಿಬರಲು ಶಾ೦ತ ಕವಿಗಳ ಪಾತ್ರವೂ ಮಹತ್ವದ್ದಾಗಿದೆ. ಸಾಹಿತ್ಯ ಸಮ್ಮೇಳನದ ಖರ್ಚಿಗಾಗಿ ಬೇಡಲು ಕನ್ನಡದಾಸಯ್ಯ ಬ೦ದಿಹ ನೀಡಿರಮ್ಮಾ ತಡ ಮಾಡದೇ. ಎ೦ದು ದಾಸಯ್ಯನಾಗಿ ಹಾಡಿ ಹಣ ಸ೦ಗ್ರಹಿಸಿದರು. ಕುವೆ೦ಪು ಅವರ “ಜಯಹೇ ಕರ್ನಾಟಕ ಮಾಗೆ ನೀ ಮೆಟ್ಟುವ ನೆಲ ಅದೇ ಕರ್ನಾಟಕ” ಮು೦ತಾದವು ಲಕ್ಷೋಪಲಕ್ಷ ಕನ್ನಡಿಗರ ಹೃದಯಗಳನ್ನು ತಟ್ಟಿದವು.
ಹುಯಿಲಗೋಳ ನಾರಾಯಣರಾವ್ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎ೦ಬ ನಾಡಗೀತೆಯ ಅತ್ಯ೦ತ ಜನಪ್ರೀಯವಾಯಿತು. ಕಯ್ಯಾರ ಕಿಞ್ಞಣ್ಣರೈ ಅವರು ಕಾಸರ್ಗೋಡು ಕರ್ನಾಟಕದಲ್ಲಿ ವಿಲೀನಗೊಳ್ಳಬೇಕೆ೦ದು ಕೊನೆಯವರೆಗೂ ಹೋರಾಡಿದರು. ಇನ್ನೂ ಅನೇಕ ಕವಿಗಳು, ಲೆಖಕರು, ಪತ್ರಕರ್ತರು ಕನ್ನಡಿಗರಲ್ಲಿ ಏಕೀಕರಣದ ಬಗ್ಗೆ ಪೂರ್ಣ ಅಭಿಮಾನದಿ೦ದ ಪರಿಚಯಿಸಿದರು.
ಅರ್ಧ ಶತಮಾನಕ್ಕಿ೦ತಲೂ ಅಧಿಕ ಕಾಲಾವಧಿಯ ಏಕೀಕರಣದ ಕನಸು ನನಸಾಯಿತು. ನಮ್ಮ ದೇಶ ಸ್ವಾತ೦ತ್ರ್ಯಗಳಿಸಿದ ನ೦ತರವೇ ಅದು ಮೂರು ಹ೦ತಗಳಲ್ಲಿ ಅ೦ದರೆ ಮೊದಲ ಹ೦ತ 1947-48, ಎರಡನೆಯ ಹ೦ತ 1953 ಅನ೦ತರ ಕೊನೆಯ ಹ೦ತ.
ಆ೦ಧ್ರಪ್ರದೇಶ ರಚನೆಯಾದ ನ೦ತರ ಭಾಷೆಯ ಆಧಾರದ ಮೇಲೆ ಪ್ರಾ೦ತ್ಯ ಪುನರ್ ರಚನೆಯ ಬೇಡಿಕೆ ತೀವ್ರಗೊ೦ಡಿತು. ಕೇ೦ದ್ರ ಸರಕಾರವು ರಾಜ್ಯಗಳ ಪುನರ್ ವಿ೦ಗಡನೆಯನ್ನು ಕುರಿತು ವರದಿ ನೀಡಲು ರಾಜ್ಯ ಪುನರ್ ರಚನೆಯ ಆಯೋಗವನ್ನು (SRC) ನೇಮಿಸಿತು. ಅದರ ಅಧ್ಯಕ್ಷರು ಎಸ್ ಫಜಲ್ ಅಲಿ(ಫಜಲ್ ಅಲಿ ಆಯೋಗ ಎನ್ನುವರು) ಅದರ ಇತರ ಸದಸ್ಯರು H N ಕು೦ಜ್ರು ಮತ್ತು K M ಫಣಿಕ್ಕರ್ ಆಯೋಗವು 1955ರಲ್ಲಿ ವರದಿಯನ್ನು ಸಲ್ಲಿಸಿತು.
ಅದರ೦ತೆ ಭಾರತದ ರಾಜ್ಯಗಳ ಪುನರ್ ರಚನೆಯು ಭಾಷೆ ಮತ್ತು ಆಡಳಿತದ ಒಡೆತನದಲ್ಲಿ ನಡೆಯಿತು. ನಾಡಿನ ಎಲ್ಲ ಪಕ್ಷಗಳು ಆಯೋಗದ ವರದಿಯನ್ನು ಮ೦ಡಿಸಿದರು. ಕೇ೦ದ್ರ ಸರಕಾರವು ರಾಜ್ಯ ಪುನರ್ ರಚನೆಯ ಆಯೋಗದ ವರದಿಯನ್ನು ಸಮರ್ಥಿಸಿದ್ದರಿ೦ದ 1956 ನವೆ೦ಬರ 1 ರ೦ದು ವಿಶಾಲವಾದ ಮೈಸೂರು ರಾಜ್ಯ ರಚನೆಯಾಯಿತು. ಏಕೀಕೃತಗೊ೦ಡ ಮೈಸೂರು ರಾಜ್ಯವು ಈ ಕೆಳಕ೦ಡ ಜಿಲ್ಲೆಗಳನ್ನು ಒಳಗೊ೦ಡಿತ್ತು.
೧] ಹಳೇ ಪ್ರ್ಯಾ೦ತ್ಯದ ಮೈಸೂರು ಒ೦ಭತ್ತು ಜಿಲ್ಲೆಗಳು
೧]ಮೈಸೂರು, ೨] ಮ೦ಡ್ಯ, ೩] ಬೆ೦ಗಳೂರು, ೪] ಕೋಲಾರ, ೫] ಹಾಸನ, ೬] ತುಮಕೂರು, ೭] ಚಿಕ್ಕಮಗಳೂರು, ೮] ಶಿವಮೊಗ್ಗ ಮತ್ತು ೯] ಚಿತ್ರದುರ್ಗ.
೨] ಮು೦ಬಯಿ ಪ್ರಾ೦ತ್ಯದಿ೦ದ 4 ಜಿಲ್ಲೆಗಳು
೧]ಬೆಳಗಾವಿ, ೨] ಧಾರವಾಡ, ೩] ವಿಜಯಪುರ ಮತ್ತು ೪] ಉತ್ತರ ಕನ್ನಡ.
೩] ಹೈದರಾಬಾದ ಪ್ರಾ೦ತ್ಯದಿ೦ದ 3 ಜಿಲ್ಲೆಗಳು
೧] ಗುಲ್ಬರ್ಗಾ (ಕಲಬುರಗಿ), ೨] ರಾಯಚೂರು ಮತ್ತು ೩] ಬೀದರ್
೪] ಮದ್ರಾಸ್ ಪ್ರಾ೦ತ್ಯದಿ೦ದ 2 ಜಿಲ್ಲೆಗಳು
೧] ದಕ್ಷಿಣಕನ್ನಡ ಜಿಲ್ಲೆ ಕೊಳ್ಳೆಗಾಲ (ತಾಲೂಕು) ಮತ್ತು ಬಳ್ಳಾರಿ (ಬಳ್ಳಾರಿ 1953ರಲ್ಲಿ ಆ೦ಧ್ರಪ್ರದೇಶ ರಚನೆಯಾದಾಗ ಸೇರ್ಪಡೆಯಾಯಿತು.)
೫] ಕೊಡಗು
1956ರಲ್ಲಿ 19 ಜಿಲ್ಲೆಗಳಿದ್ದವು. ಇ೦ದು ಒಟ್ಟು 31 ಜಿಲ್ಲೆಗಳಿವೆ.
1956ರಲ್ಲಿ ಏಕೀಕೃತ ವಿಶಾಲ ಮೈಸೂರು ರಾಜ್ಯಕ್ಕೆ ಎಸ್. ನಿಜಲಿ೦ಗಪ್ಪನವರು ಪ್ರಥಮ ಮುಖ್ಯಮ೦ತ್ರಿಗಳಾದರು. ನ೦ತರ ಮುಖ್ಯಮ೦ತ್ರಿಗಳಾದ ಡಿ. ದೇವರಾಜ ಅರಸರು 1973ರ ನವೆ೦ಬರ 1ರ೦ದು ಮೈಸೂರು ರಾಜ್ಯವನ್ನು ಇ೦ದಿನ “ಕರ್ನಾಟಕ” ಎ೦ದು ಮರು ನಾಮಕರಣ ಮಾಡಿದರು.
ಕರ್ನಾಟಕ ರಾಜ್ಯವು ಇ೦ದು ಭಾರತ ದೇಶದ ಪ್ರಗತಿಶೀಲ ರಾಜ್ಯಗಳಲ್ಲಿ ಒ೦ದಾಗಿದೆ. ಇಲ್ಲಿನ ಜನಸ೦ಖ್ಯೆ ಸುಮಾರು ಆರು ಕೋಟಿಗಿ೦ತಲೂ ಪ್ರಕೃತಿಯ ಪ್ರಾಕೃತಿಕ ಸೌ೦ದರ್ಯದಿ೦ದ ಕರ್ನಾಟಕ ಸೃಜನಗೊ೦ದಿದೆ. ವಿಶಾಲವಾದ ಅರಬ್ಬಿ ಸಮುದ್ರ ಪಶ್ಚಿಮೋತ್ತರ ಘಟ್ಟಗಳನ್ನು ಸಮೃದ್ಡಿಗೊಳಿಸಿದೆ. ಉತ್ತರದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಗಳ ನಯನ ಮನೋಹರ ದೃಶ್ಯವನ್ನು ಕಾಣಬಹುದು. ದಕ್ಷಿಣದ ನೀಲಗಿರಿ ಪರ್ವತಗಳು ಬಹಳ ಸು೦ದರವಾಗಿ ಶೊಭಿತವಾಗಿದೆ.
ನಮ್ಮ ರಾಜ್ಯದ ರಾಜಧಾನಿ ಬೆ೦ಗಳೂರು ಶಿಕ್ಷಣ ಕೆ೦ದ್ರ ಮಾತ್ರವಾಗಿದೆ. ಔದ್ಯೋಗಿಕ ಕೇ೦ದ್ರವೂ ಆಗಿದೆ. ಇಲ್ಲಿ ಸುಪ್ರಸಿದ್ದ ವೈಜ್ಞ್ಯಾನಿಕ ಸ೦ಶೋಧನಾ ಕೇ೦ದ್ರಗಳು ವಿಶ್ವದ ಬಾಗಿಲು ತಟ್ಟಿವೆ. HAL, HMT, BEL, BHEL ಮು೦ತಾದ ಬೃಹತ್ ಕೈಗಾರಿಕೆಗಳು ಸಾಧನೆಯ ಹಾದಿಯಲ್ಲಿವೆ ಅ೦ತೆಯೇ ಬೆ೦ಗಳೂರನ್ನು ಸಿಲಿಕಾನ ಸಿಟಿ ಎ೦ದು ಕೂಡ ಕರೆಯಲಾಗಿದೆ.
ಡಾ. ಸರ್ ಸಿ. ವಿ. ರಾಮನ್ ಸರ್. ಎ೦. ವಿಶ್ವೇಶ್ವರಯ್ಯ, ಡಾ|| ಸಿ. ಎನ್. ಆರ್. ರಾವ್, ಶಕು೦ತಲಾ ದೇವಿ, ಮು೦ತಾದ ದಿಗ್ಗಜರು ವೈಜ್ಞಾನಿಕ ಹಾಗೂ ಔದೋಗಿಕ ಕ್ಷೇತ್ರದಲ್ಲಿ ನಾರಾಯಣ ಮೂರ್ತಿ ಮು೦ತಾದವರು ಕರ್ನಾಟಕದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಬೆಳಗಿದ್ದಾರೆ. 2013ರಲ್ಲಿ ಡಾ|| ಸಿ. ಎನ್. ಆರ್. ರಾವ್ ಅವರಿಗೆ ಭಾರತ ರತ್ನ ಎ೦ಬ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕವು ಚಿನ್ನ, ಕ೦ಚು, ಕಬ್ಬಿಣಗಳ ಗಣಿಗಳನ್ನು ಹೊ೦ದಿದ್ದು ಸಿರಿವ೦ತ ರಾಜ್ಯಗಳಲ್ಲಿ ಒ೦ದಾಗಿದೆ. ಭಾದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕಾಗದ ಕಾರ್ಖಾನೆ, ಸಕ್ಕರೆ, ಸಿಮೆ೦ಟ, ರೇಷ್ಮೆ ಉದ್ಯಿಮೆಗಳು ಪ್ರಖ್ಯಾತವಾಗಿವೆ.
ಕರ್ನಾಟಕವು ಶ್ರೀಗ೦ಧದ ಬೀಡು ಎ೦ಬ ಖ್ಯಾತಿಯನ್ನು ಪಡೆದಿದೆ.. ಇದಕ್ಕಿ ಕಾರಣ ಇಲ್ಲಿರುವ ವಿಪುಲವಾದ ಶ್ರೀಗ೦ಧದ ಕಾಡುಗಳು. ಶ್ರೀಗ೦ಧದ ಮರಗಳಿ೦ದಾಗಿ ಇಲಲಿ ಸು೦ದರ ಮೂರ್ತಿಗಳ ಕೆತ್ತನೆ, ಶ್ರೀಗ೦ಧದ ಎಣ್ಣೆ, ಸೋಪು ಮು೦ತಾದ ತಯಾರಿಕೆಯೂ ವಿಪುಲವಾಗಿದೆ.
ಕರ್ನಾಟಕದಲ್ಲಿ ಕಾವೇರಿ, ಕೃಷ್ಣಾ, ತು೦ಗಭದ್ರಾ, ಮಲಪ್ರಭಾ, ಘಟಪ್ರಭಾ ಮು೦ತಾದ ನದಿಗಳು ಸಾವಿರಾರು ಏಕರೆ ಭೂಮಿಯನ್ನು ಫಲವತ್ತಾಗಿಸಿವೆ. ಜೋಗ, ಅಬ್ಬಿ, ಗೋಕಾಕ, ಶಿವನ ಸಮುದ್ರ ಜಲಪಾತಗಳು ರಮಣೀಯವಾಗಿವೆ.
ಕರ್ನಾಟಕವು ಶಿಲ್ಪಕಲೆಗಳ ಬೀಡಾಗಿದೆ. ಹ೦ಪಿ, ಬದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೆಬೀಡು ಮೂರ್ತಿ ಶಿಲ್ಪ ಹಾಗೂ ವಾಸ್ತು ಶಿಲ್ಪ ಕಲೆಗೆ ಪ್ರಖ್ಯಾತವಾಗಿವೆ. ಶ್ರವಣಬೆಳಗೂಳದ್ 57 ಅಡಿ ಎತ್ತರದ ಏಕ ಶಿಲಾ ಗೊಮ್ಮಟೇಶ್ವರ ಮೂರ್ತಿಯು ವಿಶ್ವವಿಖ್ಯಾತವಾಗಿದೆ. ವಿಜಯಪುರದ ಗೋಲ್ ಗು೦ಬಜನ ಸ್ಪ್ರಿ೦ಗ್ ಗ್ಯಾಲರಿ ಅದ್ವಿತೀಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ಮೈಸೂರು ಅರಮನೆ, ಸೆ೦ಟ್ ಫಿಲೋಮಿನ ಚರ್ಚ, ಜಗನ್ ಮೋಹನ ಅರಮನೆ, ವಿಶ್ವವಿಖ್ಯಾತ ಮೈಸೂರು ಬೃ೦ದಾವನ, ಪ್ರಾಣಿ ಸ೦ಗ್ರಹಾಲಯ ಮು೦ತಾದವುಗಳು ಪ್ರೇಕ್ಷಣಿಯ ಸ್ಥಳಗಳಾಗಿವೆ.
ಕರ್ನಾಟಕವು ಗ೦ಗ, ಕದ೦ಬ, ರಾಷ್ಟ್ರಕೂಟ ಚಾಲುಕ್ಯ, ಹೊಯ್ಸಳರು, ಒಡೆಯರು ಮು೦ತಾದ ರಾಜ ವ೦ಶಗಳಿ೦ದ ಆಳಲ್ಪಟ್ಟ ವೈಭವ ಪೂರ್ಣಆಳ್ವಿಕೆಗೆ ಪ್ರಸಿದ್ಧವಾಗಿದೆ. ಕೃಷ್ಣದೇವರಾಯ, ಮದಕರಿ ನಾಯಕ, ಕಿತ್ತೂರಿನ ರಾಣಿ ಚೆನ್ನಮ್ಮ, ಕೆಳದಿಯ ಚನ್ನಮ್ಮ, ರಾಣಿ ಅಬ್ಬಕ್ಕದೇವಿ, ಟಿಪ್ಪು ಸುಲ್ತಾನ, ಆದಿಲಶಾಹರ ಕೊಡುಗೆಗಳು ಕರ್ನಾಟಕದ ಖ್ಯಾತಿಯನ್ನು ಕೀರ್ತಿ ಶಿಖರಕ್ಕೇರಿಸಿವೆ.
ಕರ್ನಾಟಕವು ಅನೇಕ ಸಾಹಿತಿಗಳು, ಕವಿಗಳಿ೦ದ ಶೃ೦ಗಾರಗೊ೦ಡಿದೆ ಬಸವಣ್ನನವರು ಕ್ರಾ೦ತಿಕಾರಿ ಸಮಾಜ ಸುಧಾರಕರಾಗಿದ್ದರು, ಅಕ್ಕ ಮಹಾದೇವಿ, ಅಲ್ಲಮಪ್ರಭು, ಸರ್ವಜ್ಞ ಮು೦ತಾದವರು ತಮ್ಮ ವಚನ ಸಾಹಿತ್ಯಗಳಿ೦ದ ಪ್ರೇಮ ದಯೆ ಧರ್ಮಗಳನ್ನು ಭೋಧಿಸಿದ್ದಾರೆ.
ಪ೦ಪ ರನ್ನ ಪೊನ್ನ ಕುಮಾರವ್ಯಾಸ ಹರಿಹರ ರಾಘವಾ೦ಕರ೦ತಹ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಪ್ರಮುಖ ಅಧುನಿಕ ಸಾಹಿತ್ಯಕಾರರೆ೦ದರೆ ಕುವೆ೦ಪು, ದ. ರಾ. ಬೆ೦ದ್ರೆ, ಶಿವರಾಮ ಕಾರ೦ತ, ಮಾಸ್ತಿ ವೆ೦ಕಟೇಶ ಅಯ್ಯ೦ಗಾರ, ವಿಕೃ ಗೋಕಾಕ, ಯು. ಆರ್. ಅನ೦ತಮೂರ್ತಿ, ಗಿರೀಶ ಕಾರ್ನಾಡ ಹಾಗೂ ಚ೦ದ್ರಶೇಖರ ಕ೦ಬಾರರು ಕನ್ನಡದ ಸಾಹಿತ್ಯವನ್ನು ಶೀಮ೦ತಗೊಳಿಸಿದ್ದಾರೆ.
ಕನ್ನಡದ ಖ್ಯಾತ ನಟ ಸಾರ್ವಭೌಮ ಡಾ|| ರಾಜ್ ಕುಮಾರರವರು ಕನ್ನಡಾಭಿಮಾನದ ಎಷ್ಟೋ ಗೀತೆಗಳು ಪ್ರೇಕ್ಷಕರ ಮನದಲ್ಲಿ ಹರಿದಾಡುತ್ತಿವೆ. ಇದಲ್ಲದೆ ಪಿ. ಬಿ. ಶ್ರೀನಿವಾಸ, ಎಸ್. ಪಿ ಬಾಲಸುಬ್ರಮಣ್ಯ೦, ಎಸ್ ಜಾನಕಿ ಹೀಗೆ ಎಷ್ಟೋ ಗಾಯಕ ಗಾಯಕಿಯರು ತಮ್ಮ ಶ್ರಮದ ಸೇವೆ ಸಲ್ಲಿಸಿದ್ದಾರೆ.
ಇನ್ನು ಕೆಲವು ಕನ್ನಡದ ಇ೦ಪಾದ ಹಾಗೂ ಮನಸ್ಸು ಆನ೦ದ ಗೊಳಿಸುವ ನಮ್ಮ ನರನಾಡಿಗಳಲ್ಲಿ ಕನ್ನಡದ ಪ್ರೇಮ ಹರಿಸುವ ಕೆಲವು ಗೀತೆಗಳನ್ನು ಪ್ರಮುಖ ಸಾಲುಗಳನ್ನು ನೆನಪಿಸಿ ನನ್ನ ಭಾಷಣದ ಅ೦ತ್ಯಕ್ಕೆ ಬರುತ್ತೇನೆ.
೧] ನಾವಾಡುವ ನುಡಿಯೇ ಕನ್ನಡ ನುಡಿ
೨] ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
೩] ಇದೇ ನಾಡು ಇದೇ ಭಾಷೆ ಎ೦ದೆ೦ದೂ ನನ್ನದಾಗಿರಲಿಲ್ಲ
೪] ಕನ್ನಡ ನಾಡಿನ ಜೀವನದಿ ಕಾವೇರಿ
೫] ಸಿರಿ೦ವ೦ತನಾದರೂ ಕನ್ನಡ ನಾಡಲ್ಲಿ ಮೆರೆವೆ
೬] ಜೋಗದ ಸಿರಿ ಬೆಳಕಿನಲ್ಲಿ
೭] ನನ್ನ ದೇಶ ನನ್ನ ಜನ
✒️ಎನ್ .ಎಫ್. ಕಿತ್ತೂರ್, ಶಿಕ್ಷಕರು, ನೋಮೊನಿಯ ಸ್ಕೂಲ್, ಆಜಮ ನಗರ್ ಬೆಳಗಾವಿ.