This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಕಾಂಗ್ರೆಸ್ ಪಕ್ಷದ ದಿಗ್ವಿಜಯ ಬೆಳಗಾವಿಯಿಂದ ಆರಂಭ ! The victory of the Congress party starts from Belgaum!


 

ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿರುವ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧಿವೇಶನ ನಡೆಸಿದ ಐತಿಹಾಸಿಕ ವೀರ ಸೌಧದಿಂದ ಹೋರಾಟ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಪ್ರಜಾಧ್ವನಿ ಬಸ್ ಯಾತ್ರೆಗೆ ಪಕ್ಷದ ಮುಖಂಡರು ಬುಧವಾರ ಚಾಲನೆ ನೀಡಿದರು.

ಬೆಳಗಾವಿ :
ಕಾಂಗ್ರೆಸ್‌ ಪಕ್ಷ ಇದೀಗ ಚುನಾವಣಾ ಕಹಳೆಯೂದಲು ಮುಂದಾಗಿದೆ. ಬುಧವಾರದಿಂದ ಮಹತ್ವಾಕಾಂಕ್ಷೆಯ ಪ್ರಜಾಧ್ವನಿ ಬಸ್ ಯಾತ್ರೆ ಬೆಳಗಾವಿಯಿಂದ ಆರಂಭವಾಗಿದೆ.

ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 21 ಜಿಲ್ಲೆಗಳನ್ನು ಸುತ್ತಲಿರುವ ಈ ಯಾತ್ರೆ ಬಿಜೆಪಿಯ ದುರಾಡಳಿತದ ಬಗ್ಗೆ ಜನರಿಗೆ ತಿಳಿಸಲಿದೆ ಎಂದು ಹೇಳಲಾಗಿದೆ. ಬೆಳಗಾವಿಯ ವೀರಸೌಧದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಾಯಕರು 39 ನೇ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದ ವೀರಸೌಧದ ಪಂಪಾ ಸರೋವರದ ಜಲವನ್ನು ತೆಗೆದುಕೊಂಡು ಯಾತ್ರೆಯನ್ನು ಆರಂಭಿಸಿದ್ದಾರೆ.

ರಣದೀಪ್ ಸಿಂಗ್ ಸುರ್ಜೇವಾಲಾ, ಎಂ.ಬಿ. ಪಾಟೀಲ, ಸಲೀ ಅಹಮ್ಮದ್, ಬಸವರಾಜ ರಾಯರೆಡ್ಡಿ, ಅಂಜಲಿ ನಿಂಬಾಳ್ಕರ್, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ಕೌಜಲಗಿ, ಪರಮೇಶ್ವರ ನಾಯಕ, ಡಿ.ಬಿ.ಇನಾಂದಾರ, ಆರ್.ವಿ.ದೇಶಪಾಂಡೆ, ವಿನಯ ಕುಲಕರ್ಣಿ, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್
ಸೇರಿದಂತೆ ಮೊದಲ ದಿನ ಕಾಂಗ್ರೆಸ್‌ನ ಎಲ್ಲಾ ನಾಯಕರು ಪಾಲ್ಗೊಂಡಿದ್ದಾರೆ.


Jana Jeevala
the authorJana Jeevala

Leave a Reply