ಬೆಂಗಳೂರು:ಹಿರಿಯ ಐಎಎಸ್ ಅಧಿಕಾರಿ ಡಾ. ಅಶೋಕ ದಳವಾಯಿ ನೇತೃತ್ವದಲ್ಲಿ 1984ನೇ ಬ್ಯಾಚ್ ನ 10ಜನ ಐಎಎಸ್ ಅಧಿಕಾರಿಗಳು ಬರೆದ ‘ರಿಪ್ಲೆಕ್ಷನ್ಸ್ ಆನ್ ಇಂಡಿಯಾಸ್ ಪಬ್ಲಿಕ್ ಪಾಲಿಸಿಸ್'( Reflections on India’s Public Policies)ಪುಸ್ತಕವನ್ನು ಉಪರಾಷ್ಟ್ರಪತಿ ಜಗದೀಪ ಧನಕರ್ ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು.
‘ಭಾರತದ ಸಾರ್ವಜನಿಕ ನೀತಿ ನಿಯಮಗಳ ಪ್ರತಿಬಿಂಬ’ ಎಂಬ ಪುಸ್ತಕವನ್ನು ದೇಶದ ನುರಿತ ಪ್ರಖ್ಯಾತ ನೀತಿನಿರೂಪಕ ಅಧಿಕಾರಿಗಳ ತಂಡ ರಚಿಸಿದ್ದು, ಭಾರತದ ಮುನ್ನಡೆಗೆ ಬೇಕಾದ ದೇಶಿಯ ನೀತಿಗಳ ಬಗೆಗಿನ ಮಾಹಿತಿ ನೀಡಲಾಗಿದೆ. ದೇಶದ ನುರಿತ ಪಾಲಿಸಿ ನಿರೂಪಕ ಹಿರಿಯ ಐಎಎಸ್ ಅಧಿಕಾರಿಗಳಾದ ಡಾ.ಅಶೋಕ ದಳವಾಯಿ, ಅರವಿಂದ ಮೆಹತಾ, ಅಲೋಕ ಶ್ರೀವಾತ್ಸವ, ಅಜಯ್ ತ್ಯಾಗಿ, ರೀನಾ ರೇ, ರಾಜೇಶ್ ಸಿಂಗ್, ಶೈಲೇಂದ್ರ ಜೋಷಿ, ಶ್ರೀಮತ್ ಪಾಂಡೆ, ಸತೀಶ ತಿವಾರಿ, ತರುಣ ಶ್ರೀಧರ್ ಈ ಅಪರೂಪದ ಪುಸ್ತಕ ರಚಿಸಿದ್ದಾರೆ. ಅಭಿವೃದ್ಧಿಶೀಲ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ದೇಶದ ನೀತಿ ನಿಯಮಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಉಪರಾಷ್ಟ್ರಪತಿ ಅಭಿಪ್ರಾಯಪಟ್ಟಿದ್ದಾರೆ.