ಜನ ಜೀವಾಳ ವರದಿ ಪ್ರಕಟವಾದ ಬೆನ್ನಲ್ಲೇ ಶಿಕ್ಷಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಜೊತೆ ಉನ್ನತ ಮಟ್ಟದಲ್ಲಿ ಸಮನ್ವಯ ಸಾಧಿಸಿ ಹೊಸ ವಿಸ್ತರಣಾ ಆದೇಶ ಹೊರ ತರುವಲ್ಲಿ ಜನ ಜೀವಾಳ ಯಶಸ್ವಿಯಾಗಿದೆ.
ಬೆಳಗಾವಿ :
ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಬಸ್ ನೀಡದೆ ಸಾರಿಗೆ ಸಂಸ್ಥೆ ಶೈಕ್ಷಣಿಕ ಸಂಸ್ಥೆಗಳಿಗೆ ಸತಾಯಿಸಿತ್ತು. ಈ ನಿಟ್ಟಿನಲ್ಲಿ ಜನಜೀವಾಳ ಪತ್ರಿಕೆ ಈ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸಿ ಸಾರಿಗೆ ಸಂಸ್ಥೆಯ ಧೋರಣೆಯನ್ನು ಸಾರಿಗೆ ಇಲಾಖೆಯ ಸಚಿವರ ಗಮನಕ್ಕೂ ತಂದು ಸಂಸ್ಥೆಯ ಅಧಿಕಾರಿಗಳ ಬೇಜವಾಬ್ದಾರಿತನ ಬಯಲು ಮಾಡಿತ್ತು.
ಬೆಳಗಾವಿ ಅಧಿವೇಶನದ ಕುಂಟು ನೆಪ ಮಾಡಿ ಸಂಸ್ಥೆ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಬಸ್ ನೀಡಿರಲಿಲ್ಲ. ಜತೆಗೆ ಅಧಿಕಾರಿಗಳು ಬಸ್ ಕೇಳಲು ಬಂದ ಶಾಲಾ ಮುಖ್ಯಸ್ಥರಿಗೆ ಉದ್ದಟತನದ ಉತ್ತರ ನೀಡಿದ್ದರು.
ಕೊನೆಗೂ ಅವಧಿ ವಿಸ್ತರಣೆ :
ಬೆಳಗಾವಿ ವಿಭಾಗದಲ್ಲಿ 2023-24ನೇ ಸಾಲಿನ ಮಕ್ಕಳ ಶೈಕ್ಷಣಿಕ ಪ್ರವಾಸದ ವೇಳಾಪಟ್ಟಿಯನ್ನು ಈಗ ಮತ್ತೊಮ್ಮೆ ಹೊಸದಾಗಿ ಪ್ರಕಟಿಸಲಾಗಿದೆ !
2023-24 ಸಾಲಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರವಾಸಕ ಮಕ್ಕಳನ್ನು ಕರೆದುಕೊಂಡು ಹೋಗಲು ಡಿಸೆಂಬರ್- 2023 ನ್ನು ಅಂತಿಮ ದಿನಾಂಕ ಎಂದು ನಿಗದಿ ಪಡಿಸಲಾಗಿತ್ತು. ಆದರೆ ಸದರಿ ತಿಂಗಳಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ವಿಭಾಗೀಯ ವ್ಯವಸ್ಥಾಪಕರು ಬಸ್ಗಳನ್ನು ಒದಗಿಸಲು ತೊಂದರೆಯಾಗುತ್ತದೆ ಎಂದು ತಿಳಿಸಿದ್ದರಂತೆ !
ಆದ್ದರಿಂದ ಡಿಸೆಂಬರ್-2023 ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಗಳು ಲಭ್ಯವಿಲ್ಲವಾದ್ದರಿಂದ ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಲು 2023-24ನೇ ಸಾಲಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರವಾಸದ ಅವಧಿಯನ್ನು ವಿಸ್ತರಿಸಿ, ಮಕ್ಕಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲು ‘ಅನುಮತಿ ನೀಡಬೇಕೆಂದು ಕೋರಲಾಗಿದೆ ಎಂದು ಇದೀಗ ಸ್ಪಷ್ಡನೆ ನೀಡಿದೆ.
ಈ ಬಗ್ಗೆ ಪರಿಶೀಲಿಸಲಾಗಿ, ಬೆಳಗಾವಿ ವಿಭಾಗಕ್ಕೆ ಒಳಪಡುವ ಶಾಲೆಗಳಿಗೆ ಮಾತ್ರ ಸಾಲಿನ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು 2023-24 ದಿನಾಂಕ:15.01.2024ರವರೆಗೆ ಅವಧಿಯನ್ನು ವಿಸ್ತರಿಸಿದೆ. ಹಾಗೂ ಉಲ್ಲೇಖ-2 ಮತ್ತು 3 ರ ಸುತ್ತೋಲೆಗಳ ಷರತ್ತಿಗೊಳವಟ್ಟು ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲು ತಿಳಿಸಿದೆ ಎಂದು ಇಲಾಖೆ ಈಗ ಪ್ರಕಟಣೆ ನೀಡಿದೆ.