ಬೆಳಗಾವಿ : ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ಈಜಲು ತೆರಳಿದ್ದ ಬಾಲಕರು ನೀರುಪಾಲಾಗಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಹನುಮಂತ ದುರ್ಗಪ್ಪ ಹಗೇದ (10), ಬಸವರಾಜ ರಮೇಶ ಸೋಮಣ್ಣವರ (10) ಮೃತಪಟ್ಟವರು. ತಂದೆಯೊಂದಿಗೆ ಕುರಿ ಕಾಯಲು ಹೋಗಿದ್ದಾಗ ಕಾಲುವೆಗೆ ಈಜಲು ಹೋಗಿದ್ದಾರೆ. ಸಮಯ ಕಳೆದರೂ ಮಕ್ಕಳು ಕಾಣದಿದ್ದಾಗ ಬಾಲಕರ ಪೋಷಕರು ಹುಡುಕಾಟ ನಡೆಸಿದಾಗ ಇಬ್ಬರು ಬಾಲಕರ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


