ಬೆಳಗಾವಿ :
ಬೆಳಗಾವಿಯ ಪ್ರತಿಷ್ಠಿತ ಸೀರೆ ಮಳಿಗೆಯಲ್ಲಿ ಕಳ್ಳತನ ಮಾಡಿದ
ಪುರುಷರು ಹಾಗೂ ಮಹಿಳೆಯರ ಗುಂಪಿನಿಂದ ಪೊಲೀಸರು ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇವರು ಬೆಳಗಾವಿ ಮಾತ್ರವಲ್ಲ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಹಾ ಸೀರೆ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ನವೆಂಬರ್ 3 ರಂದು ಬೆಳಗಾವಿ ನಗರ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ
ಖಡೇಬಜಾರ ರಸ್ತೆಯಲ್ಲಿರುವ ವಿರೂಪಾಕ್ಷಿ ಸಿಲ್ಕ್ & ಸಾರೀಜ್ ಅಂಗಡಿಯಲ್ಲಿ 7-8 ಜನ ಆರೋಪಿತರು
ಮೋಸತನದಿಂದ ಅಂಗಡಿಯ ಕೆಲಸಗಾರರ ಗಮನವನ್ನು ಬೇರೆ ಕಡೆಗೆ ಸೆಳೆದು 1,40,700 /- ರೂ. ಮೌಲ್ಯದ 9
ಕಾಂಚಿಪುರಂ ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ಖಡೇಬಜಾರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಭಾಗಿಯಾದ ಆರೋಪಿತರ ಪತ್ತೆಗಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು ತನಿಕ ತಂಡ ರಚಿಸಿ ವೈಜ್ಞಾನಿಕ ತಂತ್ರಜ್ಞಾನ ಮಾಹಿತಿ ಆಧರಿಸಿ ನವೆಂಬರ್ 8 ರಂದು ಮಹಾರಾಷ್ಟ್ರದ ಶಿರಡಿಯಲ್ಲಿ ಎಂಟು ಜನ ಆರೋಪಿತರನ್ನು ಪತ್ತೆ ಮಾಡಿ ನವೆಂಬರ್ 9 ರಂದು ಖಡೇ ಬಜಾರ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಕೈಗೊಂಡಿದ್ದರು.
ಸಾಹಸ ಮೆರೆದ ಖಡೆೇ ಬಜಾರ್ ಪೊಲಿೀಸರು..!
ಬೆಳಗಾವಿ ಕ್ರೈಂ ಡಿಸಿಪಿ ಸ್ನೆಹಾ ಪಿ ವಿ ಅವರ ಮಾರ್ಗದರ್ಶನದಲ್ಲಿ ಖಡೇ ಬಜಾರ್ ಪಿಎಸ್ಐ ಆನಂದ ಆನಂದ ಆದಗೊಂಡ ಹಾಗೂ ನಾಲ್ವರು ಜನ ಪುರುಷ ಪೆದೆಗಳು ಮತ್ತು ಮಹಿಳಾ ಪೆದೆಗಳೊಂದಿಗೆ ಕರ್ನಾಟಕ, ಆಂದ್ರಪ್ರದೇಶ ಹಾಗೂ ಮಹಾರಾಷ್ಟ್ರ ಹಲವು ಕಡೆ ಶೋಷಣೆ ನಡೆಸಿ ಕೊನೆಗೆ ಶಿರಡಿ ಸಾಯಿ ಬಾಬಾ ಸನ್ನಿಧಿಯಲ್ಲಿ ದರ್ಶನ ಪಡೆಯಲು ಹೋಗಿದ್ದ ವೇಳೆ ಈ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಈ ಆರೋಪಿಗಳು ಮೈಸೂರು ನಗರದ ಯುವರಾಜ ಸಾರಿ ಸೆಂಟರ್ ನಲ್ಲಿ ಎರಡುವರೆ ಲಕ್ಷ ಮೌಲ್ಯದ ಸೀರೆಗಳನ್ನು ಸಹಾ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಅವರ ವಶದಲ್ಲಿದ್ದ ಏಳು ಲಕ್ಷ ರೂಪಾಯಿ ಮೌಲ್ಯದ ಇನ್ನೊವಾ ಕಾರು ಮತ್ತು ಮೊಬೈಲ್ ಗಳನ್ನು ಜಪ್ತು ಮಾಡಿಕೊಂಡಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಆರೋಪಿತರನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಬೆಳಗಾವಿ ಮತ್ತು ಮೈಸೂರಿನಲ್ಲಿ ಕಳ್ಳತನ ಮಾಡಿದ 3,90,700 ರೂಪಾಯಿ ಮೌಲ್ಯದ ಕಾಂಚಿಪುರಂ ರೇಷ್ಮೆ ಸೀರೆಗಳನ್ನು ವಶಪಡಿಸಿ ಕೊಂಡಿದ್ದು ಆರೋಪಿಗಳ ತನಿಖೆ ಮುಂದುವರಿಸಲಾಗಿದೆ.
ವಾರದ ಅವಧಿಯಲ್ಲಿ ಈ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು 10 ಸಾವಿರ ರೂಪಾಯಿ ನಗದು ಬಹುಮಾನ ಪ್ರಕಟಿಸಿದ್ದಾರೆ.
ದಸ್ತಗಿರಿಯಾದ ಆರೋಪಿಗಳು :
1] Eeta Sunita W/O Chandrashekharbabu, Age: 45 Yrs, Tadepalli Village, Dist: Gunturu, (AP)
2] Chadala Kanakadurga W/O Ravi, Age: 36 Yrs, Pondapalli, Dist: Krishna , (AP)
3] Mattaparthi Rani W/O Shiva, Age: 33 Yrs, Nulakapeth, Tq. Mangalagiri, Dist: Gunturu (AP)
4] Devarakonda Mani W/O Durgarao, Age: 39 Yrs, Yanamalakuduru, Dist: Krishna, (AP)
5] Mecharapu Rajani W/O Acharao, Age: 30 Yrs, Kondapalle, Dist: Krishna, (AP)
6] Ponna chukkamma W/O Veeraih, Age: 50 Yrs, Kondapalle, Dist: Krishna, (AP)
7] Kanumuri VenkateshwarRao S/O Sambaiah, Age: 41 Yrs, Ibrahimpattanam, Dist: Krishna, (AP)
8] Usuruganti Venkateshwaralu S/O Ramulu, Age: 34 Yrs, Mohammadpet Dist: Krishna, (AP)