ನಾಗಪುರ :ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಆತನೊಂದಿಗೆ ಇದ್ದ ಉಗ್ರ ಅಫ್ಸರ್ ಪಾಷಾನನ್ನು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಅಧಿಕಾರಿಗಳು ನಾಗಪುರಕ್ಕೆ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
ಎನ್ ಐಎ, ಎಟಿಎಸ್ ಹಾಗೂ ಐಬಿ ಅಧಿಕಾರಿಗಳ ತಂಡ ಪಾಷಾನನ್ನು ವಿಚಾರಣೆ ನಡೆಸುತ್ತಿದೆ. ಪಾಷಾ ಜತೆ ಸೇರಿ ಜಯೇಶ್ ಪೂಜಾರಿ ಸಚಿವ ಗಡ್ಕರಿಗೆ ಕೊಲೆ ಬೆದರಿಕೆ ಹಾಕಿದ್ದ. ಇವರಿಗೆ ಭಯೋತ್ಪಾದನೆ ನಂಟು ಇರುವ ಅನುಮಾನದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಪಾಷಾನನ್ನು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.