ಮೂಡಲಗಿ: ವಿಧಾನಸಭಾ ಸ್ಪೀಕರ್ ಅವರು ಬಿಜೆಪಿ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. 18 ಬಿಜೆಪಿಯ ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ ಇದು ಸರ್ವಾಧಿಕಾರಿ ಧೋರಣೆ ತೋರುತ್ತದೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಭಾಧ್ಯಕ್ಷರ ನಡೆಯನ್ನು ವಿರೋಧಿಸಿದರು.
ರವಿವಾರ ಮಾ-23 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತ ಇದ್ದರು ಕೂಡಾ ಪಕ್ಷದೊಳಗಿನ ಆಂತರಿಕ ಕಚ್ಚಾಟ್, ಮುಖ್ಯಮಂತ್ರಿ ಗಾದಿಗಾಗಿ ನಡೆಯುತ್ತಿರುವ ಅಂತರಯುದ್ದ, ಗುಂಪುಗಾರಿಕೆ ಕಾರಣದಿಂದ ಇಡಿ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದ್ದು, ಧರ್ಮ ಆಧಾರಿತ ಮೀಸಲಾತಿ ನೀಡುವಂತಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಹೇಳಿದ್ದಾರೆ. ಹೀಗಿದ್ದರೂ ಸಂವಿಧಾನ ವಿರೋಧಿ ಕಾಂಗ್ರೇಸ್ ಸರ್ಕಾರ ಮುಸ್ಲಿಂ ಮತಗಳ ಓಲೈಕೆಗೆಗಾಗಿ ಗುತ್ತಿಗೆಯಲ್ಲಿ ಶೇ 4% ರಷ್ಟು ಮೀಸಲಾತಿ ನೀಡುತ್ತಿರುವುದು ಇವು ರಾಜ್ಯಕ್ಕೆ ಮಾರಕವಾದ ಘಟನೆಗಳು ಇದನ್ನು ಖಂಡಿಸುತ್ತೆನೆ ಮತ್ತು ಬರುವ ದಿನಗಳಲ್ಲಿ ಬಿಜೆಪಿ ಸದನದೊಳಗೆ ಮತ್ತು ಸದನದ ಹೊರಗೆ ಹೋರಾಟ ಮಾಡಲಿದೆ ಎಂದರು.