ದೆಹಲಿ :
ನೈಜ ಶಿವಸೇನೆ ಯಾವುದು ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣಕ್ಕೆ ಶುಭ ಸುದ್ದಿ ರವಾನಿಸಿತ್ತು. ಶಿಂಧೆ ನೇತೃತ್ವದ ಪಕ್ಷವೇ ನೈಜ ಶಿವಸೇನೆ ಎಂದು ಮಾನ್ಯತೆ ನೀಡಿತ್ತು. ಆದರೆ ಇದನ್ನು ವಿರೋಧಿಸಿ ಉದ್ದವ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಕಟ್ಟೆ ಹತ್ತಿತ್ತು.
ಕಾನೂನು ಹೋರಾಟದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ . ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ ಸ್ಥಾನಮಾನದ ಜೊತೆಗೆ ಬಿಲ್ಲು – ಬಾಣ ಚಿಹ್ನೆ ನೀಡಿರುವ ಚುನಾವಣಾ ಆಯೋಗದ ಕ್ರಮ ರದ್ದು ಪಡಿಸಬೇಕೆಂದು ಕೋರಿ ಠಾಕ್ರೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆಯೋಗದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಹೀಗಾಗಿ ಶಿಂಧೆ ಬಣ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.