ಬೆಳಗಾವಿ :ಕಳೆದ 1 ಗಂಟೆಯಿಂದ ಹುದಲಿಯಲ್ಲಿ ಬಸ್ ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದು, ವಿದ್ಯಾರ್ಥಿಗಳು, ನೌಕರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಗೆ ಸಂಬಂಧಪಟ್ಟರೂ ಇಲ್ಲಿ ಸುಳಿಯುತ್ತಲೇ ಇಲ್ಲ. ಕೆಎಸ್ ಆರ್ ಟಿಸಿ ಡಿಸಿ ಅವರು ಈ ಬಗ್ಗೆ ಗಮನಹರಿಸಬೇಕು.
ಸುಮಾರು ಹದಿನೈದು ಬಸ್ಸುಗಳು ನಿಂತಿವೆ. ಈ ಪ್ರತಿಭಟನೆಗೆ ಮುಕ್ತಿ ಹಾಡಲು ಇಲಾಖೆಯವರು ಕೂಡಲೇ ಗಮನ ಹರಿಸಬೇಕು.
ಆಸ್ಪತ್ರೆಗೆ ಹೋಗುವ ರೋಗಿಗಳು ಕೂಡ ನರಳುವ ಘಟನೆ ಜರುಗುತ್ತಿವೆ.
ಈ ಭಾಗದ ಜನರು ಬಸ್ಸಿಗಾಗಿ ಅನುಭವಿಸುವ ಸಮಸ್ಯೆ ಹೇಳತೀರದು. ಪ್ರತಿದಿನ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಆದಷ್ಟು ಬೇಗ ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸಿ ಕೊಡಬೇಕು ಎಂಬ ಆಗ್ರಹ ಕೇಳಿಬಂದಿದೆ.