ಬೆಳಗಾವಿ : ಎಚ್ ಡಿ ಕುಮಾರಸ್ವಾಮಿ ಬಡಾವಣೆ ಶಿವಾಲಯದಲ್ಲಿ ಕೊನೆಯ ಶ್ರಾವಣ ಸೋಮವಾರದ ಅಂಗವಾಗಿ ಬಡಾವಣೆಯ ರಹವಾಸಿಗಳ ಸಂಘ ಶಿವಾಲಯ ಸೇವಾ ಸಮಿತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಅಧ್ಯಾತ್ಮಿಕ ಚಿಂತನ ಶಿಬಿರವನ್ನು ಏರ್ಪಡಿಸಲಾಗಿತ್ತು.
ವೇದಾಂತ ಚಿಂತನ ಸಭೆಯ ಗೌರವ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಡಾವಣೆಯ ರಹವಾಸಿಗಳ ಸಂಘದ ಅಧ್ಯಕ್ಷ ರುದ್ರಣ್ಣ ಚಂದರಗಿ ಅವರು, ನಮ್ಮ ಬಡಾವಣೆಯಲ್ಲಿ ಅನೇಕ ಸಂಘ-ಸಂಸ್ಥೆಗಳಿದ್ದು ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಲ್ಲಾ ರಹವಾಸಿಗಳ ಸಹಕಾರದಲ್ಲಿ ಹಾಗೂ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಬಡಾವಣೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತವೆ. ಈ ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿ ಕುರಿತು ಎಲ್ಲರೂ ಶ್ರಮಿಸೋಣ. ಈ ನಮ್ಮ ಬಡಾವಣೆಯನ್ನು ಬೆಳಗಾವಿ ಪಟ್ಟಣದಲ್ಲಿ ಅತ್ಯುತ್ತಮ ಸೌಕರ್ಯದ ಬಡಾವಣೆ ಎಂದು ಗುರುತಿಸುವಂತೆ ಮಾಡೋಣ ವಿನಂತಿಸಿದರು.
ಶಿವಾಲಯದ ಸೇವಾ ಸಮಿತಿಯ ಅಧ್ಯಕ್ಷ ಬಿ.ಐ. ಪಾಟೀಲ ಮಾತನಾಡಿ, ಈ ವರ್ಷ ಶ್ರಾವಣ ಮಾಸದಲ್ಲಿ ನಾಲ್ಕು ಶ್ರಾವಣ ಸೋಮವಾರಗಳು ಬಂದಿದ್ದು ಪ್ರತಿ ಸೋಮವಾರದಂದು ಒಬ್ಬೊಬ್ಬ ಸಾಧಕರಿಂದ ಪ್ರವಚನ ಏರ್ಪಡಿಸಲಾಗಿತ್ತು. ನಮ್ಮ ಬಡಾವಣೆಯ ಜನರಲ್ಲಿ ಭಕ್ತಿ ಭಾವ ಉಂಟು ಮಾಡುವಲ್ಲಿ ನಾವು ಯಶಸ್ವಿಯಾಗಿರುತ್ತೇವೆ. ಅದಕ್ಕೆ ಬಡಾವಣೆಯ ಎಲ್ಲಾ ನಾಗರಿಕರ ಸಹಕಾರವೇ ಕಾರಣ. ಇನ್ನು ಮುಂದೆಯೂ ಎಲ್ಲರೂ ಒಗ್ಗಟ್ಟಿನಿಂದ ಇದ್ದು ಶಿವಾಲಯದಲ್ಲಿ ಆಧ್ಯಾತ್ಮಿಕ ಚಿಂತನ ನಡೆಸೋಣ ಎಂದು ತಿಳಿಸಿದರು.
ಆಧ್ಯಾತ್ಮಿಕ ಚಿಂತನದಲ್ಲಿ ಬೈಲಹೊಂಗಲ ತಾಲೂಕಿನ ಬೈಲವಾಡ ವರ್ತಿ ಶ್ರೀ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಂಕರ ದೇವರು, ಆಶೀರ್ವಚನ ನೀಡಿ, ಶ್ರಾವಣ ಮಾಸದ ಈ ಒಂದು ತಿಂಗಳ ಪರ್ಯಂತರ ಭಗವಂತನ ನಾಮಸ್ಮರಣೆ ಆತನ ಲೀಲೆಗಳ ಬಗ್ಗೆ ಹಾಗೂ ಅನೇಕ ಮಹಾತ್ಮರ ಪುರಾಣಗಳನ್ನು ಆಲಿಸಿ ತಮ್ಮ ಜೀವನವನ್ನು ಕೃತಾರ್ತರನ್ನಾಗಿ ಮಾಡಿಕೊಳ್ಳುವುದು ಈ ಶ್ರಾವಣ ಮಾಸದ ಉದ್ದೇಶವಾಗಿದೆ ಎಂದರು.
ಬಡಾವಣೆಯ ಪಂಚ ಕಮಿಟಿಯ ಅಧ್ಯಕ್ಷ ಅರವಿಂದ ಜೋಶಿ ಉಪಸ್ಥಿತರಿದ್ದರು.
ಬಡಾವಣೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಜಿ.ನೀರಲಗಿಮಠ, ಮಹಾದೇವ ಹೊಂಗಲ, ಯಲ್ಲಪ್ಪ ಪಾಟೀಲ, ಶಿವಪುತ್ರ ಫಟಕಳ, ಶ್ರೀಧರ ಕುಲಕರ್ಣಿ, ಪಟ್ಟಣಶೆಟ್ಟಿ, ಎಸ್. ಸಿ.ಗಂಗಾಪುರ, ಸಂಗೊಳ್ಳಿ, ಸೋಮಶೇಖರ ಬೋಸಲೆ , ಕೃಷ್ಣ ಹಂದಿಗುಂದ ಹಾಗೂ ಮಹಿಳಾ ಸಂಘದ ಸದಸ್ಯರಾದ ಶೋಭಕ್ಕ ಹೊಸಮಠ, ರೇಣುಕಾ ಜಾಧವ ಸುಧಾ ರೊಟ್ಟಿ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.
ಬಡಾವಣೆಯ ಸರಕಾರಿ ನ್ಯಾಯವಾದಿ ಉಮೇಶ ಪಾಟೀಲ ಪರಿಚಯಿಸಿದರು.
ಮಹಾದೇವ ಹೊಂಗಲ ನಿರೂಪಿಸಿದರು.
ಬೆಳಗಾವಿ ಕುಮಾರಸ್ವಾಮಿ ಬಡಾವಣೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಧ್ಯಾತ್ಮಿಕ ಚಿಂತನ ಶಿಬಿರ ಯಶಸ್ವಿ : ಬೆಳಗಾವಿಯಲ್ಲೇ ಅತ್ಯುತ್ತಮ ಸೌಕರ್ಯದ ಬಡಾವಣೆ ಎಂದು ಗುರುತಿಸುವಂತೆ ಮಾಡೋಣ : ರುದ್ರಣ್ಣ ಚಂದರಗಿ ವಿನಂತಿ
