ಬೆಳಗಾವಿ : ಬೆಳಗಾವಿ ಉತ್ತರದಲ್ಲಿದ್ದ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ವಿಭಜಿಸಿ ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ತೆಗೆದುಕೊಂಡು ಹೋಗುವಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಕಾರಣರಾಗಿದ್ದರು. ಸಬ್
ರಿಜಿಸ್ಟ್ರಾರ್ ಕಚೇರಿ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಇರಬೇಕು ಎಂಬ ಕಾರಣಕ್ಕೆ ಅವರು ಆ ಕಚೇರಿಯನ್ನು ದಕ್ಷಿಣಕ್ಕೆ ಒಯ್ದಿದ್ದರು. ಆದರೆ, ಇದೀಗ ಅವರ ಯೋಜನೆ ವೈಫಲ್ಯ ಕಂಡಿದೆ. ಮೊದಲು ಎಲ್ಲಿ ಕಾರ್ಯನಿರ್ವಹಿಸುತ್ತಿತ್ತೋ ಅಲ್ಲಿಗೆ ಬಂದು ಪ್ರತ್ಯೇಕವಾಗಿ ನಿನ್ನೆಯಿಂದ ಕಾರ್ಯ ನಿರ್ವಹಣೆ ಆರಂಭಿಸಲು ಕಾರಣವಾಗಿದೆ.
ಬೆಳಗಾವಿ ಮಹಾನಗರದ ದಕ್ಷಿಣ ಕ್ಷೇತ್ರದ ಸಬ್ ರಿಜಿಸ್ಟರ್ ಕಚೇರಿ ಮತ್ತೆ ಇದೀಗ ಮೊದಲಿನ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಕೆಲ ತಿಂಗಳ ಹಿಂದೆ ಇದನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದ ಜನರಿಗೆ ತೀವ್ರ ತೊಂದರೆ ಎದುರಾಗಿತ್ತು. ಜನರ ಸಮಸ್ಯೆಯನ್ನು ಆಲಿಸಿರುವ ಆಡಳಿತ, ಕೊನೆಗೂ ಇದನ್ನು ದಕ್ಷಿಣದಿಂದ ಬೆಳಗಾವಿ ಉತ್ತರಕ್ಕೆ ಸ್ಥಳಾಂತರ ಮಾಡಿದೆ. ಈ ಮೂಲಕ ಬೆಳಗಾವಿ ಜನತೆಗೆ ಆಗುತ್ತಿದ್ದ ತೊಂದರೆಯನ್ನು ನಿವಾರಿಸುವ ಪ್ರಯತ್ನ ಮಾಡಿದೆ. ಜನತೆ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.
ಒಟ್ಟಾರೆ, ಇದೀಗ ದಕ್ಷಿಣದಲ್ಲಿ ಕಚೇರಿ ಉಳಿಸಿಕೊಳ್ಳಲು ಆಗಲಿಲ್ಲ ಎಂಬ ನೋವು ಅಲ್ಲಿನ ಜನತೆಯದ್ದು.