ಬೆಳಗಾವಿ : ಮಹಾದ್ವಾರ ರಸ್ತೆಯ ಶಿವಗಿರಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ 25 ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವವನ್ನು ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಅಧ್ಯಕ್ಷ ಗಂಗಾಧರ್ ಎಂ ಅವರು, ಸಂಸ್ಥೆ ನಡೆದು ಬಂದ ಹಾದಿಯನ್ನು ಸ್ಮರಿಸಿ ಮುಂದೆಯೂ ಎಲ್ಲರೂ ಒಟ್ಟಾಗಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಎಂದರು. ಉಪಾಧ್ಯಕ್ಷ ಸುನೀಲ್ ಪೂಜಾರಿ ಮಾತನಾಡಿ ಸಂಸ್ಥೆಯ ಏಳ್ಗೆ ಗಾಗಿ ಎಲ್ಲಾರೂ ಶ್ರಮಿಸೋಣ. ಸಂಸ್ಥೆ ವತಿಯಿಂದ ಇನ್ನಷ್ಟು ಸಾಮಾಜಿಕ ಸೇವೆ ಮಾಡೋಣ ಎಂದರು.
ಅಧ್ಯಕ್ಷ ಸುಜನ್ ಕುಮಾರ್ ಮಾತನಾಡಿ, ಇಲ್ಲಿಯವರೆಗೆ ಸಂಸ್ಥೆಯ ಕೆಲಸ ಕಾರ್ಯಗಳಿಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದೆಯೂ ಎಲ್ಲರ ಸಹಕಾರವನ್ನು ಕೋರಿದರು.
ನಿಪ್ಪಾಣಿ ಓಂಶಕ್ತಿ ದೇವಸ್ಥಾನ ಪೀಠದ ಮಹಾಕಾಳಿ ಮಹಾ ಸಂಸ್ಥಾನದ
ಶ್ರೀ ಅರುಣಾನಂದತೀರ್ಥ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ ಶುಭ ಹಾರೈಸಿದರು.
ಶಾಖಾ ವ್ಯವಸ್ಥಾಪಕ ಚಂದ್ರ ಪೂಜಾರಿ ಅವರು ಸಂಸ್ಥೆಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಏಳಿಗೆಗೆ ಶ್ರಮ ವಹಿಸಿದ ಮಾಜಿ ಅಧ್ಯಕ್ಷರು,ನಿರ್ದೇಶಕರನ್ನು ಸನ್ಮಾನಿಸಲಾಯಿತು. ಮಾಜಿ ಸಿಬ್ಬಂದಿಗಳು ಹಾಗೂ ಪ್ರಸ್ತುತ ಕಾರ್ಯನಿವಹಿಸುತ್ತಿರುವ ಸಿಬ್ಬಂದಿ, ನಿರ್ದೇಶಕರನ್ನು ಹಾಗೂ ಪಿಗ್ಮಿ ಸಂಗ್ರಹಕಾರರನ್ನು ಗೌರವಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಡಿ ಕಾರ್ಯನಿರ್ವಹಿಸುತ್ತಿರುವ ಸ್ವ -ಸಹಾಯ ಗುಂಪುಗಳ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಉದ್ಯಮಿ ವಿಠ್ಠಲ ಹೆಗ್ಡೆ,
ಬಂಟರ ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ,ಹೊಟೇಲ್ ಮಾಲಿಕರ ಸಂಘದ ಮಾಜಿ ಅಧ್ಯಕ್ಷ ವಿಜಯ ಸಾಲಿಯಾನ್ ಉಪಸ್ಥಿತರಿದ್ದರು.
ಹುಕ್ಕೇರಿ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಬೆಳಗಾವಿಯ ಆಶೀರ್ವಾದ ಗ್ರೂಪ್ ಆಫ್ ಹೋಟೆಲ್ ಯುವ ಉದ್ಯಮಿ ಪ್ರಭಾಕರ ಶೆಟ್ಟಿ, ಬೆಳಗಾವಿಯ ರಾಷ್ಟ್ರ ದೇಹದಾರ್ಢ್ಯ ಸಂಘಟನೆಯ ಅಂತರಾಷ್ಟ್ರೀಯ ತೀರ್ಪುಗಾರ ಅಜಿತ ಸಿದ್ದಣ್ಣವರ ಅವರನ್ನು ಸನ್ಮಾನಿಸಲಾಯಿತು.
ಸೊಸೈಟಿಯ ರಜತ ಮಹೋತ್ಸವ ಪ್ರಯುಕ್ತ ಹೊರ ತರಲಾಗುವ ಸ್ಮರಣ ಸಂಚಿಕೆಯ ಮುಖಪುಟವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಸಂಸ್ಥೆಯ ಎಲ್ಲಾ ನಿರ್ದೇಶಕರು ಸಿಬ್ಬಂದಿ ವರ್ಗದವರು ಹಾಗೂ ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ಪ್ರದೀಪ ಪೂಜಾರಿ ನಿರೂಪಿಸಿ ವಂದಿಸಿದರು.
ಬೆಳಗಾವಿ ಶಿವಗಿರಿ ಸೊಸೈಟಿಯ ರಜತ ಮಹೋತ್ಸವ
