ಬೆಳಗಾವಿ : ದಿನಾಂಕ :- 25-01- 25 ಶನಿವಾರದಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ELC ಮತ್ತು VAF ಸಂಘದ ಅಡಿಯಲ್ಲಿ 15 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಥಮ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳಾದ ಲಕ್ಷ್ಮಿ ಹುಬ್ಬಳ್ಳಿ , ಅನ್ನಪೂರ್ಣ ಹಣ ಬರರವರು ಪ್ರಾರ್ಥಿಸಿದರು.ELC ಮತ್ತು VAF ಸಂಘದ ಕಾರ್ಯದರ್ಶಿ ಪ್ರೊ.ಸುನಿಲ ಪಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮತದಾನದ ಮಹತ್ವ, ಉದ್ದೇಶ ಹಾಗೂ ಜಾಗೃತಿ ಮೂಡಿಸುವ ಕುರಿತು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ ಅವರು ಭಾರತದ ಪ್ರಜೆಗಳಾದ ನಮಗೆ ಮತದಾನ ಮಾಡುವ ಹಕ್ಕು ನಮ್ಮ ಸಂವಿಧಾನ ಕೊಟ್ಟ ಅತ್ಯಂತ ದೊಡ್ಡ ಅವಕಾಶವಾಗಿದೆ. ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ಮಹತ್ವ ಪಾತ್ರ ವಹಿಸುತ್ತದೆ. ಮತದಾನ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ. ಇಂದಿನ ದಿನಗಳ್ಲಿ ಅಕ್ಷರಸ್ಥರು ಮತದಾನ ಮಾಡಲು ಹಿಂಜರಿಯುವುತ್ತಿರುವುದು ದುರದೃಷ್ಟಕರವಾಗಿದೆ. ಆವಿಷಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ನಾವು ನಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಮತದಾನ ನಮ್ಮ ಪ್ರಥಮ ಕರ್ತವ್ಯವಾಗಿದೆ. ಭಾವಿ ಶಿಕ್ಷಕರು ಈ ಜಾಗೃತಿ ಮೂಡಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ಕೊಟ್ಟರು.
ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಥಮ ಹಾಗೂ ತೃತೀಯ ಸೆಮೆಸ್ಟರ ಪ್ರಶಿಕ್ಷಣಾರ್ಥಿಗಳು ಹಾಗೂ ಡಾ.ಎಸ್ .ವಿ. ವಾಲಿಶೆಟ್ಟಿ, ಪ್ರೊ. ಸೋನಲ ಚಿನಿವಾಲ, ಡಾ. ಗೀತಾ ದಯಣ್ಣವರ, ಪ್ರೊ.ಮಂಜುನಾಥ ಕಲಾಲ, ಪ್ರೊ.ಮಲ್ಲಿಕಾರ್ಜುನ ಜಮಖಂಡಿ, ಪ್ರಶಾಂತ ಚಿನಕೋಟಿ, ವೀಣಾ ಕೋಣಿ, ಸ್ನೇಹಾ ಮುರಕೀಭಾವಿ ಉಪಸ್ಥಿತರಿದ್ದರು. ಪ್ರೊ.ರೂಪಾ ಅಕ್ಕಿ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.