ಬೆಳಗಾವಿ: ಗಿಡದಿಂದ ಬಿದ್ದು ವಿಪರೀತ ನೋವಿನಿಂದಾಗಿ ನರಳಾಡುತ್ತಿದ್ದ ಮಂಗನ ಮರಿಯನ್ನು ತಕ್ಷಣ ಅರಣ್ಯ ಇಲಾಖೆಗೆ ಒಪ್ಪಿಸಿ ಸೂಕ್ತ ಚಿಕಿತ್ಸೆ ಒದಗಿಸಿ ,ರಕ್ಷಿಸಿದ ಘಟನೆ ಶುಕ್ರವಾರ ಬೆಳಗಾವಿ ರಾಮತೀರ್ಥ ನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಹತ್ತಿರ ಜರುಗಿದೆ.
ರಾಮತೀರ್ಥನಗರದಲ್ಲಿಯ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಸಮೀಪದಲ್ಲಿಯ ನಿವೇಶನದ ಬದಿಯ ಗಿಡ ಗಂಟಿಗಳಲ್ಲಿ ಬಿದ್ದು ನರಳಾಡುತ್ತಿದ್ದ ಈ ಮಂಗನ ಮರಿಯನ್ನು ಗಮನಿಸಿದ ಪ್ರದೇಶದ ಜನರಿಂದ ವಿಷಯ ಅರಿತ ಬೆಳಗಾವಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ ತಕ್ಷಣ ರಾಜ್ಯ ಎಸ್ ಪಿ ಸಿ ಸದಸ್ಯ ಜಗದೀಶ ಮಠದ ಮತ್ತು ಪ್ರಾಣಿ ದಯಾ ಸಂಘದ ಸದಸ್ಯ ರಾದ ಸಂತೋಷ ಧರೇಕರ, ಅವದೂತ್ ತುಡವೇಕರ್, ಮಹದೇವ್ ಟೊಣ್ಣೆ ಅವರನ್ನು ಸಂಪರ್ಕಿಸಿದ ಪ್ರಯುಕ್ತ ಕಾರ್ಯಪ್ರವರ್ತರಾದ ಸಂಘದ ಸದಸ್ಯರು ಮಂಗನನ್ನು ಜಾಗರೂಕತೆಯಿಂದ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿ ಇಲಾಖಾಧಿಕಾರಿಗಳ ಪ್ರಶಂಸೆಗೊಳಗಾಗಿದ್ದಾರೆ. ಅರಣ್ಯ ಇಲಾಖೆಯ.ಆರ್ ಎಫ್ ಓ ಗಳಾದ ಚಂದ್ರಕಾಂತ ಅಪ್ಪಣ್ಣವರ, ಪುರುಷೋತ್ತಮ, ಬೀಟ್ ಅಧಿಕಾರಿಗಳಾದ ಸಿದ್ದಾರ್ಥ ಚಲವಾದಿ, ಮಲ್ಲಿಕಾರ್ಜುನ ಜಾಟ್ಟನ್ನವರ, ಮತ್ತು ಸಿಬ್ಬಂದಿ ಉಪಸ್ಥಿತರಿದ್ದು, ಈ ಪ್ರಾಣಿ ಜೀವ ಕಾಪಾಡಿದ್ದಕ್ಕೆ, ಸಾರ್ವಜನಿಕರು ಇಂಥಹ ಮಾನವೀಯ ಕಾರ್ಯಕ್ಕೆ ಮುಂದಾಗಬೇಕೆಂದರಲ್ಲದೆ, ಧನ್ಯವಾದ ಹೇಳಿದ್ದಾರೆ.