ಬೆಳಗಾವಿ :
ರಾಣಿ ಚನ್ನಮ್ಮ ಹೌಸಿಂಗ್ ಸೊಸೈಟಿಯಲ್ಲಿ
ಶ್ರಾವಣ ಮಾಸದ ಪ್ರಯುಕ್ತ
ಜಾಗತಿಕ ಲಿಂಗಾಯತ ಮಹಾಸಭೆಯ ನೇತೃತ್ವದಲ್ಲಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಹಲವಾರು ಸ್ವಾಮೀಜಿಗಳು, ಶರಣರ ಸಹಭಾಗಿತ್ವದಲ್ಲಿ ನಡೆದ
ಸದ್ಭಾವನೆ ಹಾಗೂ ಧರ್ಮಜಾಗೃತಿಗಾಗಿ ಶ್ರೀಗಳ ನಡೆ ಸದ್ಭಕ್ತರ ಕಡೆ ಎಂಬ ಪರಿಕಲ್ಪನೆಯ ಪಾದಯಾತ್ರೆ ಮತ್ತು ರುದ್ರಾಕ್ಷಿ ಧಾರಣ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು.
ರಾಣಿ ಚನ್ನಮ್ಮ ಹೌಸಿಂಗ್ ಸೊಸೈಟಿಯ
ಎಲ್ಲ ಶರಣ ತಾಯಂದಿರು ಹಾಗೂ ಸಹೋದರಿಯರು ರಂಗವಲ್ಲಿ ಹಾಗೂ ಹೂಗಳಿಂದ ಅಲಂಕರಿಸಿ ತಮ್ಮ ಮನೆಯ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಪ್ರತಿಷ್ಠಾಪಿಸಿ ಯಶಸ್ವಿಗೊಳಿಸಿದರು. ಪರಮಪೂಜ್ಯ ಶ್ರೀಗಳು ಅಭೂತಪೂರ್ವವಾದ ಭಕ್ತಿ-ಭಾವದ ಈ ಕಾರ್ಯವನ್ನು ಅಭಿಮಾನದಿಂದ, ಅಕ್ಕರೆಯಿಂದ ಸ್ಮರಿಸಿದ್ದಾರೆ.
ಅತ್ಯಲ್ಪ ಸಮಯದಲ್ಲೇ
ಈ ಒಂದು ಪಾದಯಾತ್ರೆ ಇಷ್ಟೊಂದು ಪ್ರಮಾಣದಲ್ಲಿ ಯಶಸ್ವಿಯಾಗಲು ಕಾರಣೀಭೂತರಾಗಿರುವ ಎಲ್ಲರಿಗೂ ಹೃದಯ ಪೂರ್ವಕ ವಂದನೆಗಳು ಹಾಗೂ ಅಭಿನಂದನೆ ಸಲ್ಲಿಸಿದರು.
ಬಡಾವಣೆಯ ಎಲ್ಲ ಗುರು-ಹಿರಿಯರು, ಸಹೋದರ- ಸಹೋದರಿಯರು ಶರಣ-ಬಂಧುಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಆಗಮಿಸಿದ ಎಲ್ಲ ಶರಣ- ಬಂಧುಗಳಿಗೆ ವಾರ್ಡ್ ನಂ 35 ರ ನಗರಸೇವಕಿ ಲಕ್ಷ್ಮೀ ಮಹಾದೇವ ರಾಠೋಡ ಉಪಹಾರದ ವ್ಯವಸ್ಥೆ ಮಾಡಿದರು.