ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಣುಕಿ ನೋಡದ ಮಳೆರಾಯನ ದೆಸೆಯಿಂದ ಜನಜಾನುವಾರು ಬೇಸತ್ತಿದ್ದು, ರೈತ ತಲೆಮೇಲೆ ಕೈ ಹೊತ್ತಿದ್ದಾನೆ.
ಜೂನ್ 21ಕಳೆದರೂ ಹನಿಯೊಡೆಯದ ಮಳೆಯಿಂದ ಬೆಳಗಾವಿ ನಗರ ಸುತ್ತಲ ಬಿತ್ತಿರುಚ ಭತ್ತ ಮೊಳಕೆಯಲ್ಲಿಯೇ ಕಮರತೊಡಗಿದೆ, ಡ್ಯಾಂ ಕೆರೆಕಟ್ಟೆ, ತೊರೆಗಳು ಈಗಾಗಲೇ ಒಣಗಿ ಬೆಳಗಾವಿ ನಗರದ ನಲ್ಲಿಗಳಲ್ಲಿ ಕಳೆದ 15ದಿನಗಳಿಂದ ಹನಿನೀರು ತೊಟ್ಟಿಕ್ಕಿಲ್ಲ.
ಒಣಹುಲ್ಲು, ಹೊಟ್ಟು ಸಹ ಮುಗಿದುಹೋಗಿದ್ದು ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಪ್ರತಿವರ್ಷ ಜೂನ್ ಮೊದಲಾರ್ಧದಲ್ಲಿಯೇ ಹಸಿಮೇವು ತಿನ್ನುತ್ತಿದ್ದ ಜಾನುವಾರುಗಳಿಗೆ ಈಗ ಒಣಹೊಟ್ಟು ಸಹ ದುಸ್ತರವಾಗಿದೆ.
ಬೆಳಗಾವಿ ನಗರದಲ್ಲಿ ಸಾಕಲಾಗುವ ಹೈನುಗಾರಿಕೆಯ ಎಮ್ಮೆ ಹಸುಗಳಿಗೆ ಹಸಿಹುಲ್ಲಿ ಒದಗಿಸುವ ಇಲ್ಲಿನ ಮೇವಿನಮಾರುಕಟ್ಟೆಯಲ್ಲಿ ದರ ಹೆಚ್ಚಾಗಿದ್ದು, ಪೂರೈಕೆ ಕೊರತೆ ಕಂಡಿದೆ.
ಹಸಿಮೇವು ಇಲ್ಲದಿದ್ದರೆ ತೊರೆ ಬಿಡದ ದನಗಳ ಮಾಲೀಕರುಈಗ ಕಂಗಾಲಾಗಿದ್ದಾರೆ. ಏರಿದ ಹಸಿಮೇವಿನ ದರ ಎಷ್ಟಾದರೂ ಕೊಡೋಣವೆಂದರೆ ಈಗ ಆ ಮೇವು ಸಿಗದಿರುವ ದೃಶ್ಯ ಬೆಳಗಾವಿ ನಗರ ಹೃದಯಭಾಗದ ಮೇವು ಮಾರುಕಟ್ಟೆಯಲ್ಲಿ ಕಂಡುಬಂತು.
ಇನ್ನೇನು ಎರಡ್ಮೂರುದಿನದಲ್ಲಿ ಬೆಳಗಾವಿ, ಧಾರವಾಡ-ಹುಬ್ಳಿ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯಾಗದಿದ್ದರೆ ಜನಜಾನುವಾರ ಜೀವನ ದೇವರಿಗೆ ಪ್ರೀತಿ ಉಂಟು ಮಾಡಲಿದೆ.