ದೆಹಲಿ: 1995ರ ವಕ್ಫ್ ಕಾಯಿದೆಗೆ ತಿದ್ದುಪಡಿ ಮಾಡಿರುವ ವಿಧೇಯಕ ಲೋಕಸಭೆಯಲ್ಲಿ ಗುರುವಾರ ಮಂಡನೆ ಆಗಲಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಿಧೇಯಕ ಮಂಡಿಸಲಿದ್ದಾರೆ. ತಿದ್ದುಪಡಿ ವಿಧೇ ಯಕಕ್ಕೆ ಈಗಾಗಲೇ ಮುಸ್ಲಿಂ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸದನದಲ್ಲಿ ಭಾರಿ ಗದ್ದಲವಾಗುವ ಸಾಧ್ಯತೆ ಇದೆ. ಬಹಳಷ್ಟು ಅಂಶಗಳಲ್ಲಿ ತಿದ್ದುಪಡಿ ಮಾಡಲಾಗಿರುವ ವಕ್ಫ್ ಕಾಯಿದೆ ಹೆಸರನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ’ (ಯುನಿಫೈಡ್ ವಕ್ಫ್ ಮ್ಯಾನೇಜ್ಮೆಂಟ್, ಎಂಪವರ್ಮೆಂಟ್, ಎಫಿಷಿಯೆನ್ಸಿ ಆ್ಯಂಡ್ ಡೆವಲಪ್ಮೆಂಟ್ ಆ್ಯಕ್ಟ್) ಎಂದು ಬದಲಿಸುವ ಪ್ರಸ್ತಾಪವಿದೆ. ಸರ್ವಾನುಮತದ ಅಂಗೀಕಾರ ಪಡೆಯುವುದು ಎನ್ಡಿಎ ಆದ್ಯತೆ. ಅಗತ್ಯ ಚರ್ಚೆಗೆ ಜಂಟಿ ಸಮಿತಿಗೆ ವಿಧೇಯಕ ಕಳುಹಿಸಿಕೊಡಲು ಸಿದ್ಧವಿರುವುದಾಗಿ ಕೇಂದ್ರ ಹೇಳಿದೆ.