ಬೆಳಗಾವಿ: ಕನ್ನಡ ಮಾತಾಡು ಎಂದಿದ್ದಕ್ಕೆ ಹಲ್ಲೆಗೊಳಗಾದ ಕಂಡಕ್ಟರ್ ವಿರುದ್ಧ ಪೋಕ್ಸೊ ಕೇಸು ದಾಖಲಾಗಿದೆ.
ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಎಂಬವರ ವಿರುದ್ಧ ಪೋಕ್ಸೋ ಕೇಸು ದಾಖಲಾಗಿದೆ.
ಬೆಳಗಾವಿಯಿಂದ ಸುಳೇಭಾವಿಗೆ ಹೊರಟಿದ್ದ ಬಸ್ ನಲ್ಲಿ ಬಾಳೇಕುದ್ರಿ ಕೆ.ಎಚ್. ಗ್ರಾಮಕ್ಕೆ ಬಾಲಕಿ ಪ್ರಯಾಣಿಸುತ್ತಿದ್ದಳು. ಟಿಕೆಟ್ ಕೇಳಿದಾಗ, ಕನ್ನಡದಲ್ಲಿ ಮಾತನಾಡುವಂತೆ ಕಂಡಕ್ಟರ್ ಹೇಳಿದ್ದು, ಆಗ ಬಾಲಕಿಗೆ ಕನ್ನಡ ಬರುವುದಿಲ್ಲ ಎಂದಾಗ ಮಾತಿನ ಚಕಮಕಿ ನಡೆದಿದೆ. ಬಳಿಕ ಬಾಲಕಿ ಕಡೆಯುವರು ಬಾಳೇಕುದ್ರಿಗೆ ಬಂದಾಗ ಕೆಲ ಯುವಕರು ಸೇರಿ ಹಲ್ಲೆ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಕಂಡಕ್ಟರ್ ವಿರುದ್ಧ ಬಾಲಕಿ ಪೋಕ್ಸೋ ಕೇಸು ದಾಖಲಿಸಿದ್ದಾರೆ.