ಬೆಳಗಾವಿ : ಕೊಲೆಗೈದು ಅದನ್ನು ಅಪಘಾತ ಎಂಬಂತೆ ಬಿಂಬಿಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಹದ್ದಿಯ ಬೀಮ್ಸ್ ಆಸ್ಪತ್ರೆ ಎದುರಿಗೆ ದಿನಾಂಕ.30/05/2024 ರಂದು ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ ಹರ್ಲಾಪೂರ ಸಾ॥ ಬೆಟಗೇರಿ ತಾ।। ಗದಗ ರವರು ಅವರ ತಮ್ಮನಾದ ವಿರೂಪಾಕ್ಷ ಕೊಟ್ರೆಪ್ಪ ಹರ್ಲಾಪೂರ (60) ಸಾ।। ವನಶ್ರೀ ನಗರ, ಎಸ್ಡಿಎಂ ಕಾಲೇಜು ಹಿಂದೆ ಸತ್ತೂರ, ಧಾರವಾಡ ರವರಿಗೆ ಯಾವುದೋ ವಾಹನ ಚಾಲಕ ಅಪಘಾತ ಪಡಿಸಿ ಮರಣಪಡಿಸಿದ ಬಗ್ಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಸಂಚಾರ ಉತ್ತರ ಠಾಣೆಯ ಪಿಐ ಪಿ. ಐ. ಚನ್ನಗಿರಿ ರವರು ಸಿಸಿಟಿವಿ ಫುಟೇಜ ಮತ್ತು ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಆರೋಪಿ ಮಹೇಶ ಸಿದ್ರಾಮ ಸುಂಕದ (24) ಸಾ|| ಶಾಸ್ತ್ರಿ ನಗರ, ಕಂಗ್ರಾಳಿ ಬಿ. ಕೆ. ಬೆಳಗಾವಿ ಈತನನ್ನು ಪತ್ತೆ ಮಾಡಿ ವಿಚಾರಿಸಿ ಹೇಳಿಕೆ ಪಡೆದುಕೊಂಡಾಗ ಇದೊಂದು ಪೂರ್ವಯೋಜಿತ ಅಪರಾಧಿಕ ಕೃತ್ಯವೆಂದು ದೃಢಪಡಿಸಿಕೊಂಡು ಕೊಲೆ ಮಾಡಲು ಬಳಸಿದ ಕಾರನ್ನು ಆರೋಪಿತರು ಗ್ಯಾರೇಜಗೆ ಬಿಟ್ಟಿದ್ದನ್ನು ವಶಕ್ಕೆ ಪಡೆದುಕೊಂಡು, ಈ ಪ್ರಕರಣವನ್ನು ಎಪಿಎಂಸಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.
ನಂತರ ತನಿಖೆ ಮುಂದುವರಿಸಿ ಸಂಚಾರ ಮತ್ತು ಎಪಿಎಂಸಿ ಠಾಣೆಯ ಸಿಬ್ಬಂದಿಯವರ ತಂಡ ಈ ಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಆರೋಪಿತರಾದ
1) ಬಸವರಾಜ ಭಗವತಿ (50) ಸಾ।। ಮಾಳಮಾರುತಿ ಎಕ್ಷಟನ್ಗನ್, ಬೆಳಗಾವಿ,
2) ಪ್ರಕಾಶ ರಾಠೋಡ (41) ಸಾ।। ರಾಮದೇವ ಗಲ್ಲಿ, ಕಂಗ್ರಾಳಿ ಕೆ. ಎಚ್. ಬೆಳಗಾವಿ,
3) ರವಿ ಕುಂಬರಗಿ (28) ಸಾ।। ಶಾಸ್ತ್ರಿ ನಗರ, ಕಂಗ್ರಾಳಿ ಬಿ. ಕೆ. ಬೆಳಗಾವಿ,
4) ಸಚೀನ ಪಾಟೀಲ (24) ಸಾ|| ಕಂಗ್ರಾಳಿ ಬಿ. ಕೆ. ಬೆಳಗಾವಿ
5) ರಾಮ ವಂಟಮುರಿ (28) ಸಾ|| ಕಂಗ್ರಾಳಿ ಬಿ. ಕೆ. ಬೆಳಗಾವಿ
ಇವರೆಲ್ಲನ್ನು ಪತ್ತೆ ಮಾಡಿ ವಿಚಾರಿಸಿದಾಗ ಬಸವರಾಜ ಭಗವತಿ ಈತನು ವೈಯಕ್ತಿಕ ದ್ವೇಷದಿಂದ ಮೇಲಿನ ಆರೋಪಿತರೊಡನೆ ಸೇರಿ ವಿರೂಪಾಕ್ಷ ಹರ್ಲಾಪೂರ ಇವರಿಗೆ ಕಾರ್ ಹಾಯಿಸಿ ಕೊಲೆ ಮಾಡಿ, ಕಾರನ್ನು ನಿಲ್ಲಿಸದೇ ಓಡಿಕೊಂಡು ಹೋಗಿರುತ್ತಾರೆ. ಇದರಲ್ಲಿ ಇನ್ನೊಬ್ಬ ಆರೋಪಿ ರಾಮಾ ಪಾಟೀಲ್ ಎಂಬಾತ ಪರಾರಿಯಾಗದ್ದು, ಆತನ ಪತ್ತೆ ಕಾರ್ಯ ಹಾಗೂ ಪ್ರಕರಣ ತನಿಖೆ ಮುಂದುವರೆಸಲಾಗಿದೆ.
ಹೀಗೆ ಅಪಘಾತಪಡಿಸಿ ಕೊಲೆ ಮಾಡಿದ ಆರೋಪಿರನ್ನು ಬಂಧಿಸಿ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಮಾರ್ಗದರ್ಶನ ನೀಡಿದ ಪವನ್ ಎನ್. ಎಸಿಪಿ ಸಂಚಾರ ಉಪವಿಭಾಗ ಹಾಗೂ ನೇತೃತ್ವ ವಹಿಸಿದ ಪಿಐ ಪಿ. ಆರ್. ಚನ್ನಗಿರಿ, ಪಿಐ ಸಂಚಾರ ಉತ್ತರ ಠಾಣೆ ಖಾಜಾ ಹುಸೇನ್ ಪಿಐ ಎಪಿಎಂಸಿ ಪೊಲೀಸ್ ಠಾಣೆ ಹಾಗೂ ಅವರ ಅಧೀನ ಸಿಬ್ಬಂದಿಯವರಾದ ಇ ಎ.ಬಿ. ಮೀಸೆ, ಬಿ. ಎಂ. ದೇಶಪೈಕ, ಸತೀಶ ನಾಯ್ಕವಾಡಿ, ಎಸ್ ಆರ್ ಮುನ್ನೇನಿ, ಆರ್. ವಿ. ರಸ್ಟಾಕರ್, ವೈ. ವೈ. ತಲೇವಾಡಿ, ಕಾಶಿನಾಥ ಈರಗಾರ, ಎಸ್.ವಿ. ಬಡಕುಂದ್ರಿ, ಎಸ್. ಎಸ್ ಹುಡೇದ, ಬಿ. ಎಸ್. ಬುಕನಟ್ಟಿ, ಹಾಗೂ ವಿವೇಕಾನಂದ ರವರ ತಂಡವನ್ನು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಐಪಿಎಸ್, ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರ ಹಾಗೂ ಡಿಸಿಪಿ ರವರುಗಳು ಪ್ರಸಂಶಿಸಿರುತ್ತಾರೆ.