ಬೆಳಗಾವಿ: ಬಾಲಕಿಗೆ ಕಿರುಕುಳ ನೀಡಿದ ಮೂವರಿಗೆ ಪೋಕ್ಸೋ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ರೂ. 10,000 ದಂಡ ವಿಧಿಸಿ ತೀರ್ಪು ನೀಡಿದೆ. ಭಾರತ್ ನಗರ ಬಾಕ್ಸೈಟ್ ರಸ್ತೆಯ ಸಚಿನ್ ರಾಮ್ ಸಿಂಗ್ ಸಹಾನೆ (22), ವಿಬಿಸರ ಪ್ರಸಾದ ಸಹಾನೆ (26) ಮತ್ತು ಶುಭಂ ಯಾದವ್( 23)ಇವರು ಬಾಲಕಿಯನ್ನು ಹಿಂಬಾಲಿಸಿ ಅವಾಚ್ಯ ಶಬ್ದಗಳಲ್ಲಿ ಕಮೆಂಟ್ ಮಾಡಿದ ಬಗ್ಗೆ ಬಾಲಕಿಯ ಪೋಷಕರು ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ನ್ಯಾಯಾಧೀಶೆ ಸಿಎಂ ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಹೊರಡಿಸಿದ್ದಾರೆ. ಎಲ್ .ವಿ. ಪಾಟೀಲ ಸರಕಾರದ ಪರ ವಾದ ಮಂಡಿಸಿದ್ದರು.


