ಮೂಲಸೌಕರ್ಯ ಕೊಡದೆ ಮೂಕ ಪ್ರಾಣಿಗಳಂತೆ ತಲಾಠಿಗಳಿಗಳನ್ನು ದುಡಿಸುತ್ತಿರುವ ಸರ್ಕಾರ ವಿರುದ್ಧ ಪ್ರತಿಭಟನೆಗಿಳಿದ ಸಂಘಟನೆ..!
ತಾಂತ್ರಿಕ ಹುದ್ದೆ ಅಲ್ಲದವರಿಗೆ ಟೆಕ್ನಾಲಜಿ ಕೆಲಸದ ಒತ್ತಡ ಹೇರಿ ಕಿರುಕುಳ..!
ತಲಾಠಿಗಳ ಪ್ರತಿಭಟನೆ ಬಗ್ಗೆ ಸಂಘದ ಅಧ್ಯಕ್ಷ SP ಶಿಂಧೆ ಹೇಳಿದ್ದೇನು..?
ಬೆಳಗಾವಿ : ಮೂಲಸೌಕರ್ಯ ಕೊಡದೆ ಮೂಕ ಪ್ರಾಣಿಗಳಂತೆ ತಲಾಠಿಗಳಿಗೆ ಕಿರಿಕುಳ ನೀಡಿ ರಾತ್ರಿ ಹಗಲು ದುಡಿಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ತಲಾಠಿ (ಗ್ರಾಮ ಆಡಳಿತ ಅಧಿಕಾರಿ)ಗಳ ಸಂಘಟನೆಯವರು ಎರಡು ದಿನಗಳ ಕೆಲಸ ಕಾರ್ಯ ನಿಲ್ಲಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವ ಹಿನ್ನಲೆಯಲ್ಲಿ ಇಂದು ಬೆಳಗಾವಿಯಲ್ಲೂ ತಹಶಿಲ್ದಾರ ಕಛೇರಿ ಎಂದುರಿಗೆ ಪೇಂಡಾಲ್ ಹಾಕಿಸಿ ಸುಮಾರು 65ಕ್ಕೂ ಹೆಚ್ಚು ತಲಾಠಿಗಳು ಕಾರ್ಯ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ತಲಾಠಿಗಳ ಪರವಾಗಿ ಮಾತನಾಡಿದ ಬೆಳಗಾವಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಶಿಂಧೆ ನಮ್ಮದು ತಾಂತ್ರಿಕ ಹುದ್ದೆ ಅಲ್ಲ, ಆದರು ಟೆಕ್ನಾಲಜಿ ಕೆಲಸ ಕೊಟ್ಟಿದ್ದಾರೆ. ಕೊಟ್ಟರೂ ಸರಿ, ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಕೊಡದೆ ಕಲಸ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡಲಾಗುತ್ತಿದ್ದಾರೆ. ಮುಂದೆ ನಮ್ಮ ಕಾರ್ಯಾವಧಿ ಹಾಗೂ ಕಾರ್ಯವ್ಯಾಪ್ತಿ ಬಿಟ್ಟು ಹಗಲು ರಾತ್ರಿ ಎನ್ನುದೆ ಕೆಲಸದ ಒತ್ತಡ ಹೇರಲಾಗುತ್ತಿದೆ. ಇದರಿಂದಾಗಿ ಇತ್ತೀಚಿಗೆ ತಲಾಠಿಗಳು ಈ ಒತ್ತಡ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುಂತ ಪರಿಸ್ಥಿತಿಗಳು ಬಂದೋದಗಿವೆ. ಅದಲ್ಲದೇ ಈ ಕಿರುಕುಳ ತಾಳಲಾರದೆ ತಲಾಠಿಗಳು ದುಷ್ಚ್ಟಗಳಿಗೆ ದಾಸರಾಗಿ ಕೌಟುಂಬಿಕ ಕಲಹದಿಂದಾಗಿ ಬಲಿಯಾಗುತ್ತಿದ್ದಾರೆ. ಎಂದು ಕಳವಳ ವ್ಯಕ್ತಪಡಿಸಿದರು.
ಮುಂದೆ ಮಾತನಾಡಿದ ಅವರು
1.ಸಿಸಿಇ
2.BLO App
3.ನವೋದಯ
4.ಸಂಯೋಜನೆ
5.ಕೖಷಿ ಗಣತಿ
6.ಆಧಾರ ಸೀಡಿಂಗ್
7.ಲ್ಯಾಂಡ ಬೀಟ್
8.ಪೌತಿ ಆಂದೋಲನ
9.ಪರಿಹಾರ
10.ಹಕ್ಕು ಪತ್ರ
11.ಬಗೈರ ಹುಕುಂ
12.1 to 5 (ಸರ್ಕಾರಿ ಜಮೀನು ಮಾಹಿತಿ)
13.EMS
14.ಬೆಳೆ ಸರ್ವೆ
15.ದಿಶಾಂಕ
16.Election
17.WhatsApp call
18.Google meet
19.Voter helpline
20.FID
21.Note cam
22.ನೀರಾವರಿ ಗಣತಿ
23. PMK
24. ಬೆಳೆ ಅನುಮೋದನೆ
25. ಗರುಡ ಆ್ಯಪ್
26. ಬೂಮಿ
27. ಸಿ ವಿಜನ ಆ್ಯಪ್
28. ಇ ಆಫೀಸ್
ಈ ಪ್ರಕಾರದ 30 ಕ್ಕೂ ಹೆಚ್ಚು ಮೊಬೈಲ್, ಕಂಪ್ಯೂಟರ್ ಫ್ರಿಂಟ್ ಸ್ಕ್ಯಾನರ ಮತ್ತು ಇಂಟರ್ನೆಟ್ ಆಧಾರಿತ ಕೆಲಸಗಳಿಗೆ ನ್ಮ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ತಾಂತ್ರಿಕ ಹುದ್ದೆ ಅಲ್ಲದಿದ್ದರೂ ಗೆ ಇವುಗಳನ್ನು ನಿರ್ವಹಿಸಲು ಸರಕಾರದಿಂದ ಯಾವುದೇ ಮೂಲಭೂತ ಸೌಕರ್ಯ ನೀಡಿದೇ, ಸಮಯದಲ್ಲಿಪ್ರಗತಿ ಸಾಧಿಸಲು ಒತ್ತಡ ಹೇರುತ್ತಾರೆ. ಅದಕ್ಕಾಗಿ ಸರಕಾರ ಎಲ್ಲ ಸೌಕರ್ಯ ನೀಡಿ ಕೇಲಸ ಕೇಳಿದರೆ ಅವರಿಗೂ ಒಂದು ಮಾನ್ಯತೆ ಇರುತ್ತದೆ. ಇಲ್ಲದಿದ್ದರೆ ಮಾನವಿಯತೆ ಮರೆತು ತಲಾಠಿಗಳನ್ನು ಮೂಕ ಪ್ರಾಣಿಗಳಂತೆ ಬಳಸಿಕೊಂಡಂತೆ ಆಗುತ್ತದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಶ್ರೀಕಾಂತ ಶಿಂಧೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಗ್ರಾಮ ಆಡಳಿತ ಅಧಿಕಾರಿಗಳಾದ ಕಿರಣ ತೋರಗಲ್ಲ, ಅರಗಾವಿ, ಉಪಾಧ್ಯಕ್ಷ ಏಕನಾಥ ಅಲಗೊಂಡಿ, ಶಿಂಗೆ, ಆರೀಫ ಮುಲ್ಲಾ, ಪ್ರಕಾಶ ಹುನಸಿಕಟ್ಟಿ, ಬಸನಗೌಡ ಪಾಟೀಲ, ವಿರೇಶ ಪಾಟೀಲ, ಸುನೀಲ ಚವ್ಹಾಣ, ಮರಾಠೆ, ಪ್ರದೀಪ ನಿಲಜಿ, ಮಾಹಂತೇಶ ಅಂಗಡಕಿ, ಮಾಹಂತೇಶ ಮಠಪತಿ, ಕುಗಜಿ, ಅನೀಲ ಕಮ್ಮಾರ, ಪಾಟೀಲ ಮಯೂರ ಮಾಸೇಕರ, ವಿನಾ ಇಂಚಲಕಂಜಿ, ಕವಿತಾ ಅರಳಿಕಟ್ಟಿ, ಧಿವ್ಯಾ ಕಲಾದಗಿ, ರಾಣಿ ಪಾಟೀಲ, ಕೌಸರ, ಲಕ್ಷ್ಮೀ ಕಪಲಿ, ಬಡೆಗಾರ, ಅನಿತಾ ಸೇರಿದಂತೆ 68 ತಲಾಠಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.