ಬೆಳಗಾವಿ : ನಗರದ ಕಚೇರಿ ರಸ್ತೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಅಧಿಕಾರಿಗಳು ಕಂಡು ಕಾಣದಂತೆ ಇಲ್ಲಿಯೇ ಸಂಚರಿಸುತ್ತಿದ್ದಾರೆ. ಆದರೆ ಅವರಿಗೆ ಸಮಸ್ಯೆ ಮಾತ್ರ ಕಾಣುತ್ತಿಲ್ಲವೇ ಎನ್ನುವುದು ಜನರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಬೆಳಗಾವಿ ಜಿಲ್ಲಾ ಪಂಚಾಯತ್ ಬದಿಗೆ ಇರುವಂತಹ ರಸ್ತೆಯ ಮುಂದೆ ಪಂಚಾಯತ್ ಗೇಟ್ ನ ಬದಿಗೆ ಗಟಾರು ತುಂಬಿ ಮೂರು ದಿನಗಳಿಂದ ಹರಿಯುತ್ತಿರುವ ರಸ್ತೆಯ ಮೇಲೆ ಹರಿಯುತ್ತಿದೆ. ಆದರೆ, ಸಿಬ್ಬಂದಿ ವರ್ಗ ಇತ್ತ ಲಕ್ಷ ಹರಿಸದೇ ಇರುವುದು ದುರ್ದೈವದ ಸಂಗತಿ.
ವಕೀಲರು, ಪತ್ರಕರ್ತರು, ಅನೇಕ ಪ್ರತಿಷ್ಠಿತ ರಾಜಕೀಯ ಮುಖಂಡರು ಮೂಗು ಮುಚ್ಚಿಕೊಂಡು ಹೋಗುತ್ತಿರುವ ದೃಶ್ಯ ಮೂರು ದಿನಗಳಿಂದ ಕಂಡುಬರುತ್ತದೆ. ಆದರೂ ಆಡಳಿತ ಕಣ್ಣಿದ್ದು ಕುರುಡು ಎನ್ನುವಂತಾಗಿದೆ.
ಛೇ …ಗಬ್ಬು ವಾಸನೆ ಬೀರುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು


