ಲಖನೌ: ಸ್ಪೋಟಕ ಬ್ಯಾಟಿಂಗ್ಗಿಗೆ ಹೆಸರಾಗಿರುವ ಭಾರತೀಯಕ್ಕೆ ಕ್ರಿಕೆಟ್ ತಂಡದ ಆಟಗಾರರೊಬ್ಬ ಇದೀಗ ಸುದ್ದಿಯಾಗಿದ್ದಾರೆ. ಟೀಮ್ ಇಂಡಿಯಾ ಮತ್ತು ಕೆಕೆಆರ್ ತಂಡದ ಸ್ಟಾರ್ ಎಡಗೈ ಬ್ಯಾಟರ್ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ ಸಂಸದೆ, ವಕೀಲೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ, ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 26 ವರ್ಷದ ಪ್ರಿಯಾ ಸರೋಜ್ ದೇಶದ ಹಾಲಿ 2ನೇ ಅತಿ ಕಿರಿಯ ಸಂಸದೆ ಎನಿಸಿದ್ದಾರೆ. 3 ಬಾರಿಯ ಸಂಸದ ಹಾಗೂ ಉತ್ತರ ಪ್ರದೇಶದ ಹಾಲಿ ಶಾಸಕ ತನಿ ಸರೋಜ್ ಪುತ್ರಿಯಾಗಿರುವ ಅವರು ಚುನಾವಣೆಯಲ್ಲಿ ಮೆಚ್ಲಿಶಹರ್ ಕ್ಷೇತ್ರದಿಂದ ಗೆದ್ದಿದ್ದಾರೆ. ಸಂಸದೆಯಾಗಿರುವ ಅವರು ವಕೀಲೆಯೂ ಸಹ ಆಗಿದ್ದಾರೆ.