This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

State News

ಆರೋಪ ಹೊತ್ತು ಆಗಮಿಸಿದ ನೂತನ ಕುಲಪತಿ…! ಅಲ್ಲಿ ಸಲ್ಲದವರು; ಇಲ್ಲಿ ಸಲ್ಲುವರಯ್ಯ...!?


ವಿವಾದಗಳಿಂದ ಹೊರ ಬಾರದ ವಿಟಿಯು..!?

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯದಲ್ಲಿ ಅತ್ಯಂತ ಶ್ರೀಮಂತ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಜಗತ್ತಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡಬೇಕು ಎಂಬ ಏಕೈಕ ಸದುದ್ದೇಶದಿಂದ ನಾಡಿನ ಶ್ರೇಷ್ಠ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಲ್ಲಿ ಬೆಳಗಾವಿಯಲ್ಲಿ ಎರಡೂವರೆ ದಶಕಗಳ ಹಿಂದೆ ಆರಂಭವಾದ ಪ್ರತಿಷ್ಠಿತ ವಿಶ್ವವಿದ್ಯಾಲಯ ಸದಾ ವಿವಾದದ ಗೂಡಾಗಿ ಪರಿಣಮಿಸಿದೆ. ಇದೀಗ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕವಾಗಿದೆ. ವಿಟಿಯು ಕುಲಪತಿ ನೇಮಕದ ಸರ್ಚ್ ಕಮಿಟಿ ಅಂತಿಮ ಮೂವರಲ್ಲಿ ವಿದ್ಯಾಶಂಕರ್ ಹೆಸರು ಮುನ್ನಲೆಗೆ ಬೆಳಕಿಗೆ ಬರುತ್ತಲೇ ಅವರ ವಿರುದ್ಧ ಗಂಭೀರ ಆರೋಪಗಳು ವ್ಯಕ್ತವಾಗಿದ್ದವು. ಒಟ್ಟಾರೆ, ವಿಟಿಯು ಕುಲಪತಿಗಳ ವಿರುದ್ಧ ಸುತ್ತಿಕೊಂಡಿರುವ ವಿವಾದಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಈ ಹಿಂದಿನ ಕುಲಪತಿಗಳಾಗಿದ್ದ ಬಾಲವೀರರೆಡ್ಡಿ, ಮಹೇಶಪ್ಪ ಅವರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಸಂದರ್ಭದಲ್ಲಿ ವಿಟಿಯು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದರಿಂದ ಪ್ರತಿಷ್ಠಿತ ವಿವಿ ಮಾನ ಹರಾಜಾಗಿದ್ದು ಇತಿಹಾಸ. ಇದೀಗ ಮತ್ತೆ ವಿಶ್ವವಿದ್ಯಾಲಯದ ಘನತೆ- ಗೌರವಕ್ಕೆ ಯಾವುದೇ ಧಕ್ಕೆಯಾಗದಂತಿರಲಿ. ಜಗತ್ತಿಗೇ ಶ್ರೇಷ್ಠ ಎಂಜಿನಿಯರ್ ಗಳನ್ನು ನೀಡುವತ್ತ ಬೆಳಗಾವಿಯ ವಿಟಿಯು ಖ್ಯಾತಿ ಪಡೆಯಲಿ ಎನ್ನುವುದು ಶಿಕ್ಷಣ ತಜ್ಞರ ಒತ್ತಾಸೆಯಾಗಿದೆ.

ಜನಜೀವಾಳ ಸರ್ಚ್ ಲೈಟ್ ಬೆಳಗಾವಿ :
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೂತನ ಕುಲಪತಿಯನ್ನಾಗಿ ಪ್ರೊ. ಎಸ್ .ವಿದ್ಯಾಶಂಕರ್ ಅವರನ್ನು ಗುರುವಾರ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
2016 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕವಾಗಿದ್ದ ಕರಿಸಿದ್ದಪ್ಪ ಅವರನ್ನು ಎರಡನೇ ಅವಧಿಗೂ ಮುಂದುವರಿಸಲಾಗಿತ್ತು. ಸೆಪ್ಟೆಂಬರ್ 23 ಕ್ಕೆ ಅವರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಇದೀಗ ನೂತನ ಕುಲಪತಿಯನ್ನಾಗಿ ಪ್ರೊ. ವಿದ್ಯಾಶಂಕರ್ ಅವರನ್ನು ನೇಮಕ ಮಾಡಿದ್ದಾರೆ. ಪ್ರೊ. ವಿದ್ಯಾಶಂಕರ್ ಅವರು ಇದಕ್ಕೂ ಮೊದಲು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಾರದ ಹಿಂದಷ್ಟೆ ವಿದ್ಯಾಶಂಕರ ಅವರ ಬಗ್ಗೆ ವಿವಾದ ಸೃಷ್ಟಿಸಿತು.

ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಟಿಯು ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿರುವ ಪಟ್ಟಿಯು ಮೂವರು ಅಭ್ಯರ್ಥಿಗಳ ವಿರುದ್ಧ ಗಂಭೀರ ಆರೋಪ ವ್ಯಕ್ತವಾಗಿತ್ತು.

ಎಸ್. ವಿದ್ಯಾಶಂಕರ್, ಆನಂದ ದೇಶಪಾಂಡೆ ಮತ್ತು ಗೋಪಾಲ್ ಮುಗೆರಾಯ ಅವರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ತಕ್ಷಣ ಆರೋಪಗಳು ಸೃಷ್ಟಿಯಾಗಿದ್ದವು. ವಿಟಿಯು ಕುಲಪತಿ ಹುದ್ದೆಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ವಿದ್ಯಾಶಂಕರ್ ಅವರ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಮೈಸೂರು ವಿಶ್ವವಿದ್ಯಾಲಯದ ಯೋಜನೆ ನಿಗಾವಣೆ ಹಾಗೂ ಮೌಲ್ಯಮಾಪನದ ಮಂಡಳಿ ಸದಸ್ಯರಾಗಿದ್ದ ಡಾ.ಕೆ. ಮಹದೇವ್ ಗಂಭೀರ ಆರೋಪ ಮಾಡಿದ್ದರು.

ಡಾ.ಕೆ.ಮಹದೇವ್ ಅವರು ವಿದ್ಯಾಶಂಕರ್ ವಿರುದ್ಧ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರ ಆರೋಪ ಹೊರಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದರು. ತಮ್ಮ ಆರೋಪದಲ್ಲಿ ಅವರು ಕೆಎಸ್ ಒಯು ಕುಲಪತಿಯಾಗಿ ವಿದ್ಯಾಶಂಕರ್ ವಿಶ್ವವಿದ್ಯಾಲಯದ ಹಣ ಬಳಸಿಕೊಂಡು ಹಾಲಿ ಪ್ರಾದೇಶಿಕ ಕೇಂದ್ರಗಳ ಜತೆಗೆ ಸುಮಾರು ನೂರಾರು ಕೋಟಿ ವೆಚ್ಚದಲ್ಲಿ ಮಾಗಡಿ, ಮಂಗಳೂರು, ಧಾರವಾಡಗಳಲ್ಲಿ ಪ್ರಾದೇಶಿಕ ಕೇಂದ್ರ ನಿರ್ಮಾಣ ಮಾಡುವಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದ್ದರು.

ಕೆಎಸ್ ಒಯು ಸಹಾಯಕ ಕುಲಸಚಿವ ಮೂಲತಃ ವಕೀಲರಾದ ಪ್ರದೀಪ ಗಿರಿ ಅವರನ್ನು ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಗಳ ಮೂಲಕ ದಾಳಿ ಮಾಡಿದ್ದಕ್ಕಾಗಿ ಭಾರತೀಯ ನೀತಿ ಸಂಹಿತೆಯಡಿ ಪ್ರಕರಣರುವುದಾಗಿ ತಿಳಿಸಿದ್ದರು. ಈ ಬಗ್ಗೆ ಆಗಸ್ಟ್ 2 ರಂದು ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ತಿಳಿಸಿದ್ದರು.

ಆದರೆ ತಮ್ಮ ವಿರುದ್ಧ ಕೇಳಿ ಬಂದ ಗಂಭೀರ ಆರೋಪಕ್ಕೆ ಪ್ರತ್ಯುತ್ತರ ನೀಡಿದ ವಿದ್ಯಾಶಂಕರ್, ತಮ್ಮ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಆರೋಪಗಳ ಮಾಡುತ್ತಿದ್ದು ತಮ್ಮ ವಿರುದ್ಧ ಯಾವುದೇ ಪ್ರಕರಣಗಳಿದ್ದರೂ ಅದನ್ನು ಸಮರ್ಥವಾಗಿ ಎದುರಿಸುತ್ತೇನೆ. ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಗುರಿಯಾಗಿರಿಸಿಕೊಂಡಿರುವುದು ಸ್ಪಷ್ಟವಾಗಿದೆ. ನಾನು ಯಾವುದೇ ವಿಚಾರಣೆ ಎದುರಿಸಲು ಸಿದ್ಧನಾಗಿದ್ದೇನೆ. ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸಿದ್ಧನಿದ್ದೇನೆ. ಅಲ್ಲಿವರೆಗೆ ಈ ಎಲ್ಲ ಆರೋಪಗಳು ಕೇವಲ ಅನಾಮಧೇಯರಿಂದ ಪ್ರೇರಿತಗೊಂಡಿರುವುದಾಗಿ ಭಾವಿಸುತ್ತೇನೆ. ನಾನು ನನ್ನ ಸ್ವಂತ ಯೋಗ್ಯತೆ ಮತ್ತು ಗುಣಮಟ್ಟದ ಶಿಕ್ಷಣ ಸುಧಾರಣೆಗೆ ಗಮನ ಹರಿಸಿದ್ದೇನೆ ಎಂದು ಅವರು ಉತ್ತರ ನೀಡಿದ್ದರು.

ಇದರ ಬೆನ್ನಿಗೇ ಎಸ್. ವಿದ್ಯಾಶಂಕರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು. ಡಾ. ಕೆ ಮಹದೇವ್ ವಿದ್ಯಾಶಂಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲು ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಅವರ ಮೇಲೆ ಹಲ್ಲೆಗೆ ಮಂಡ್ಯದ ರೀಜನಲ್ ಡೈರೆಕ್ಟರ್ ಸುಧಾಕರ ಹೊಸಳ್ಳಿ ಎಂಬವರು ಹಲ್ಲೆಗೆ ಯತ್ನಿಸಿದ್ದು ಈ ಕುರಿತು ದೂರು ಸಹ ದಾಖಲಾಗಿತ್ತು. ಪ್ರೊ. ವಿದ್ಯಾಶಂಕರ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ, ರಾತ್ರಿ ಪೂರ್ತಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ, ಮೊಬೈಲ್ ಗೆ ರಿಚಾರ್ಜ್ ಮಾಡಿಸಿ ಹಣ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಇದು ಆಕೆಯ ಗಂಡನಿಗೆ ಗೊತ್ತಾಗಿದೆ. ಮಹಿಳೆಯ ಗಂಡ ಮತ್ತು ಕುಲಪತಿ ಮಾತನಾಡಿದ್ದ ಆಡಿಯೋವನ್ನು ನಾನು ಬಿಡುಗಡೆ ಮಾಡುತ್ತಿದ್ದೇನೆ. ಇದನ್ನು ತಡೆಯುವ ಉದ್ದೇಶದಿಂದ ಕೆಎಸ್ ಒಯು ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ ಸೇರಿ ಮತ್ತಿಬ್ಬರು ಪ್ರಯತ್ನ ಮಾಡಿದ್ದಾರೆ ಎಂದು ಮೈಸೂರಿನ ಕೆ.ಆರ್. ಠಾಣೆಯಲ್ಲಿ ಮಹದೇವ ಅವರು ದೂರು ನೀಡಿದ್ದರು.
ಈಗಾಗಲೇ ಮೈಸೂರು ಮುಕ್ತ ವಿಶ್ವವಿದ್ಯಾಲಯ ಸಾಲುಸಾಲು ಹಗರಣಗಳಿಂದ ಸಾಕಷ್ಟು ಸುದ್ದಿಯಾಗಿದೆ. ಮಾರ್ಕ್ ಕಾರ್ಡ್ ಹಗರಣ, ಅಕ್ರಮ ನೇಮಕಾತಿ ಆರೋಪದ ಅನುದಾನ ದುರ್ಬಳಕೆ ಸೇರಿ ಅನೇಕ ವಿವಾದಕ್ಕೆ ಮುನ್ನುಡಿ ಬರೆದುಕೊಂಡಿದೆ. ಇವೆಲ್ಲವುದರ ಮೇಲೆ ಸಮಗ್ರ ತನಿಖೆ ನಡೆಸುವಂತೆ ಹಲವರು ಒತ್ತಾಯ ಮಾಡಿದ್ದರು.

ಈ ಎಲ್ಲ ಆರೋಪಗಳ ನಡುವೆಯೂ ಇದೀಗ ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ವಿದ್ಯಾಶಂಕರ್ ಅವರನ್ನು ವಿಟಿಯುಗೆ ನೂತನ ಕುಲಪತಿಯನ್ನಾಗಿ ಮಾಡಿದ್ದಾರೆ. ಒಟ್ಟಾರೆ ಗಮನಿಸುವುದಾದರೆ
ರಾಜ್ಯದ ಈ ಹೆಸರಾಂತ ವಿಶ್ವವಿದ್ಯಾಲಯ ವಿವಾದಗಳ ಸುಳಿಯಿಂದ ಹೊರಬರುವ ಲಕ್ಷಣ ಕಡಿಮೆ ಎನಿಸುತ್ತದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

 


Jana Jeevala
the authorJana Jeevala

Leave a Reply