ಬೆಳಗಾವಿ :
ಕೊನೆಗೂ ರಾಯಬಾಗ ತಾಲೂಕು ಕಟಕಬಾವಿಯ ಕೊಳವೆಬಾವಿಯಲ್ಲಿ ಜೈನ ಮುನಿಗಳ ಶವ ಪತ್ತೆಯಾಗಿದೆ.
ಜೈನ ಮುನಿಗಳು ಎಂದರೆ ಅವರು ಸತ್ಯ-ಅಹಿಂಸೆ ಸಾರುವವರು ಎಂದರ್ಥ. ಪ್ರಪಂಚದ ಹಾಗೂ ಲೋಕಿಕ ಜೀವನದಿಂದ ದೂರವಿದ್ದು ದೇಹವನ್ನು ದಂಡಿಸಿ ಸಾಧನೆಗೆ ಹಾತೊರೆಯುವರು ಎಂದರ್ಥ.
ಆದರೆ ದುರುಳರು ಇದು ಯಾವುದನ್ನು ಗಮನಿಸದೆ ಕೇವಲ ಹಣಕಾಸು ವ್ಯವಹಾರವನ್ನೇ ಮುಂದಿಟ್ಟುಕೊಂಡು ಜೈನ ಸ್ವಾಮೀಜಿಯನ್ನು ಅತ್ಯಂತ ಬರ್ಭರವಾಗಿ ಕೊಲೆಗೈದು ಅವರ ದೇಹವನ್ನು ಪೀಸ್ ಪೀಸ್ ಮಾಡಿ ಕೊಳವೆ ಬಾವಿಗೆ ಎಸೆದಿರುವುದು ಅತ್ಯಂತ ಕ್ರೂರಿ ಕೃತ್ಯ ಎನ್ನುತ್ತಾರೆ ಭಕ್ತರು.
ಕೊಲೆಯಾದ ಚಿಕ್ಕೋಡಿ ತಾಲೂಕು ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮ ಕುಮಾರ ನಂದಿ ಮಹಾರಾಜರ ಭೀಕರ ಕೊಲೆಗೆ ಭಕ್ತ ಸಮೂಹ ಇನ್ನಿಲ್ಲದಂತೆ ಕೊರಗುತ್ತಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.
ವಿದ್ಯುತ್ ಶಾಕ್ ?
ಮುನಿಗಳ ಆಪ್ತ ಪ್ರದೀಪ್ ನಂದಗಾವ್ ಅವರು ಕೊಲೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಆರೋಪಿಗಳು ಸಾಕಷ್ಟು ಕಾರ್ಯಯೋಜನೆ ಸಿದ್ಧಪಡಿಸಿಕೊಂಡ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗೆ ಕರೆಂಟ್ ಶಾಕ್ ನೀಡಿ ಕೊಂದಿರುವ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.