ಬೆಳಗಾವಿ :ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆ ರಚಿಸುವ ಸುಳಿವನ್ನು ಸಚಿವ ಸತೀಶ ಜಾರಕಿಹೊಳಿ ನೀಡಿದ್ದಾರೆ.
ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಜಿಲ್ಲೆಯ ಶಾಸಕರ ಜೊತೆ ಈಗಾಗಲೇ ಚರ್ಚಿಸಲಾಗಿದೆ. ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆ ರಚನೆಯ ಬೇಡಿಕೆ ಇದೆ. ವಿಸ್ತೀರ್ಣದಲ್ಲಿ ಅತಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಜಿಲ್ಲೆ ರಚನೆಯ ಪ್ರಸ್ತಾಪ ಬಂದಿದೆ. ಆದಷ್ಟು ಬೇಗ ಜಿಲ್ಲೆ ರಚನೆ ಮಾಡುವುದಾಗಿ ಅವರು ತಿಳಿಸಿದರು.
ತಾಲೂಕು ರಚನೆ :
ಬೆಳಗಾವಿ ನಗರ ತಾಲೂಕು ಮತ್ತು ಬೆಳಗಾವಿ ಗ್ರಾಮೀಣ ತಾಲೂಕು ಮಾಡಲು ನಿರ್ಧರಿಸಿರುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಬೆಳಗಾವಿ ಜಿಲ್ಲಾ ವಿಭಜನೆಯ ಸುಳಿವು ನೀಡಿದ ಸಚಿವರು
