ಬೆಳಗಾವಿ : ಬೆಳಗಾವಿಯಲ್ಲಿ ಇದೀಗ ನಾಯಿಗಳ ಹಾವಳಿ ಅತಿಯಾಗುತ್ತಿದೆ. ಅದರಲ್ಲೂ ನಿಯಮಿತವಾಗಿ ವಾಕಿಂಗ್ ಹೋಗುವವರ ಹಿರಿಯರ ಪಾಲಿಗೆ ಆತಂಕದ ಕ್ಷಣ ಎದುರಾಗಿದೆ. ಬೆಳಗಾವಿ ಪರಿಸರದಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಅದರಲ್ಲೂ 81 ವರ್ಷದ ವಯೋವೃದ್ಧರಿಗೆ ನಾಯಿ ಕಚ್ಚಿದ್ದು ಭೀತಿಯ ವಾತಾವರಣ ಮೂಡಿದೆ.
ನಾಯಿಗಳ ಹಾವಳಿಗೆ ಕಡಿವಾಣ ಎನ್ನುವುದೇ ಇಲ್ಲ. ದಿನೇ ದಿನೇ ಅವುಗಳ ಕಾಟ ಹೆಚ್ಚುತ್ತಿದೆ. ಅದರಲ್ಲೂ ವಾಕಿಂಗ್ ಹೋಗುವವರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ. ಆರೋಗ್ಯವಂತ ಬದುಕು ನಡೆಸಲು ಹಿರಿಯರು ಪ್ರತಿದಿನ ವಾಕಿಂಗ್ ಹೋಗುತ್ತಾರೆ. ಬೆಳಗಾವಿಯ ನಾಗರಿಕರೊಬ್ಬರು ಎಂದಿನಂತೆ ವಾಕಿಂಗ್ ಹೋಗುವಾಗ ಎಲ್ಲಿಂದಲೋ ಬಂದ ಸಾಕು ನಾಯಿ ಅವರಿಗೆ ಏಕಾಏಕಿ ಕಚ್ಚಿದೆ. ಇದರ ಪರಿಣಾಮ ಅವರು ಈಗ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನಾಯಿಗಳಿಗೆ ಸಂತಾನ ಶಕ್ತಿಹರಣ ಮಾಡಿದರೆ ಇಂತಹ ಸಮಸ್ಯೆ ಎದುರಾಗದು. ಹಿರಿಯರು, ಮಕ್ಕಳು ಹಾಗೂ ವಾಹನ ಸವಾರರಿಗೆ ಬೆನ್ನು ಬಿಡದ ನಾಯಿಗಳನ್ನು ಪತ್ತೆಹಚ್ಚಿ ಅವುಗಳ ಆಟಾಟೋಪಕ್ಕೆ ಕಡಿವಾಣ ಹಾಕಬೇಕು. ನಾಯಿಗಳ ಸಮಸ್ಯೆಗೆ ಮುಕ್ತಿ ಹಾಡಲು ಮಹಾನಗರ ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಈ ಮೂಲಕ ನಾಗರಿಕರ ಜೀವ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಬೆಳಗಾವಿ ಜನತೆಯ ಒಕ್ಕೊರಲ ಆಗ್ರಹವಾಗಿದೆ.
ಬೆಳಗಾವಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಎಚ್ಚೆತ್ತು ಕೂಡಲೇ ಅವುಗಳಿಗೆ ಸಂತಾನ ಶಕ್ತಿ ಹರಣ ಮಾಡಬೇಕು.
*ಮುರುಗೇಶ ಶಿವಪೂಜಿ, ಹಿರಿಯ ಪತ್ರಕರ್ತರು, ಬೆಳಗಾವಿ